ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ಮುಂಬೈ ಸಿಟಿ ತಂಡಕ್ಕೆ ಜಯೇಶ್‌ ರಾಣೆ

Published 24 ಜುಲೈ 2023, 13:07 IST
Last Updated 24 ಜುಲೈ 2023, 13:07 IST
ಅಕ್ಷರ ಗಾತ್ರ

ಮುಂಬೈ: ಬೆಂಗಳೂರು ಎಫ್‌ಸಿ ತಂಡದ ಮಿಡ್‌ಫೀಲ್ಡರ್‌ ಜಯೇಶ್‌ ರಾಣೆ ಅವರು ಒಂದು ವರ್ಷದ ಅವಧಿಗೆ ಮುಂಬೈ ಸಿಟಿ ಎಫ್‌ಸಿ ತಂಡದ ಪರ ಆಡಲು ಒಪ್ಪಂದ ಮಾಡಿಕೊಂಡಿದ್ದಾರೆ.

30 ವರ್ಷದ ರಾಣೆ ಅವರು 2021–22ರ ಋತುವಿನಲ್ಲಿ ಬಿಎಫ್‌ಸಿ ತಂಡವನ್ನು ಸೇರಿಕೊಂಡಿದ್ದರು. ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ 103 ಪಂದ್ಯಗಳನ್ನು ಆಡಿರುವ ಅವರು ಅನುಭವಿ ಮಿಡ್‌ಫೀಲ್ಡರ್‌ ಎನಿಸಿಕೊಂಡಿದ್ದಾರೆ. ಒಪ್ಪಂದದ ಪ್ರಕಾರ ಅವರು 2023–24ರ ಋತುವಿನಲ್ಲಿ ಮುಂಬೈ ಪರ ಆಡಲಿದ್ದಾರೆ.

‘ಅನುಭವಿ ಆಟಗಾರ ಜಯೇಶ್‌, ತಂಡವನ್ನು ಸೇರಿಕೊಂಡಿರುವುದು ಸಂತಸ ಉಂಟುಮಾಡಿದೆ. ಅವರು ಮಿಡ್‌ಫೀಲ್ಡ್‌ ವಿಭಾಗಕ್ಕೆ ಬಲ ತುಂಬಲಿದ್ದಾರೆ’ ಎಂದು ಮುಂಬೈ ತಂಡದ ಮುಖ್ಯ ಕೋಚ್ ಡೆಸ್ ಬಕಿಂಗ್‌ಹ್ಯಾಂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT