ಗುರುವಾರ , ನವೆಂಬರ್ 26, 2020
22 °C

ಮುಂಬೈ ಸಿಟಿ ಎಫ್‌ಸಿಗೆ ಒಗ್ಬೆಚೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಆಡುವ ಮುಂಬೈ ಸಿಟಿ ಎಫ್‌ಸಿ ತಂಡ ನೈಜೀರಿಯಾದ ಬಾರ್ತೊಲೊಮಿವ್‌ ಒಗ್ಬೆಚೆ ಅವರೊಂದಿಗೆ ಬುಧವಾರ ಒಪ್ಪಂದ ಮಾಡಿಕೊಂಡಿದೆ. ಒಂದು ವರ್ಷದ ಅವಧಿಗೆ ಅವರು ಮುಂಬೈ ಪರ ಆಡಲಿದ್ದಾರೆ.

ಆರಂಭದಲ್ಲಿ ಪ್ಯಾರಿಸ್‌ ಸೇಂಟ್‌ ಜರ್ಮನ್‌ ತಂಡದ ಯುವ ವಿಭಾಗಕ್ಕೆ ಸೇರಿಕೊಂಡ ಒಗ್ಬೆಚೆ, 2001-02ರ ಸಾಲಿನಲ್ಲಿ ಅದೇ ತಂಡದ ಸೀನಿಯರ್‌ ವಿಭಾಗಕ್ಕೆ ಪದಾರ್ಪಣೆ ಮಾಡಿದರು.

36 ವರ್ಷದ ಒಗ್ಬೆಚೆ, 2018–19ರ ಋತುವಿನಲ್ಲಿ ಐಎಸ್‌ಎಲ್‌ ಟೂರ್ನಿಯಲ್ಲಿ ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ತಂಡದ ನಾಯಕತ್ವ ವಹಿಸಿದ್ದರು. 18 ಪಂದ್ಯಗಳಿಂದ 12 ಗೋಲುಗಳನ್ನು ಗಳಿಸಿದ್ದರು.

2019–20ರ ಐಎಸ್‌ಎಲ್‌ ಆವೃತ್ತಿಯಲ್ಲಿ ಕೇರಳ ಬ್ಲಾಸ್ಟರ್ಸ್‌ ಪ್ರತಿನಿಧಿಸಿದ್ದ ಅವರು 16 ಪಂದ್ಯಗಳಿಂದ 15 ಗೋಲು ಹೊಡೆದಿದ್ದರು.

ಫ್ರಾನ್ಸ್, ಯುಎಇ, ಸ್ಪೇನ್‌, ಗ್ರೀಸ್‌, ಇಂಗ್ಲೆಂಡ್‌ ಹಾಗೂ ನೆದರ್ಲೆಂಡ್ಸ್‌ ಮೂಲದ ಫ್ರಾಂಚೈಸ್‌ಗಳಲ್ಲಿ ಆಡಿದ ಅನುಭವ ಒಗ್ಬೆಚೆಗೆ ಇದೆ. ನೈಜೀರಿಯಾ ರಾಷ್ಟ್ರೀಯ ತಂಡದ ಪರ 2002ರ ಫಿಫಾ ವಿಶ್ವಕಪ್‌ನಲ್ಲಿ ಆಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು