ಶನಿವಾರ, ಡಿಸೆಂಬರ್ 5, 2020
24 °C

ಮುಂಬೈ ಸಿಟಿ ಎಫ್‌ಸಿಗೆ ಮೆಹತಾಬ್‌ ಸಿಂಗ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಟೂರ್ನಿಯ ಫ್ರಾಂಚೈಸ್‌ ಮುಂಬೈ ಸಿಟಿ ಫುಟ್‌ಬಾಲ್‌ ಕ್ಲಬ್‌,  ಡಿಫೆಂಡರ್‌ ಮೆಹತಾಬ್‌ ಸಿಂಗ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

22 ವರ್ಷದ ಮೆಹತಾಬ್‌, ಮೂರು ವರ್ಷಗಳ ಅವಧಿಗೆ ತಂಡದೊಂದಿದೆ ಒಪ್ಪಂದ ಮಾಡಿಕೊಂಡಿದ್ದಾರೆ.

‘ಮುಂಬೈ ಸಿಟಿ ಎಫ್‌ಸಿಯಂತಹ ಪ್ರಮುಖ ತಂಡದಲ್ಲಿ ಆಡುವ ಅವಕಾಶ ಸಿಕ್ಕಿರುವುದು ದೊಡ್ಡ ಗೌರವ. ಇಲ್ಲಿ ಪರಿಶ್ರಮ ಹಾಗೂ ಕಲಿಕೆಗೆ ಆದ್ಯತೆ ನೀಡುತ್ತೇನೆ‘ ಎಂದು ಮೆಹತಾಬ್‌ ಹೇಳಿದ್ದಾರೆ.

ಪಂಜಾಬ್‌ನ ಮೆಹತಾಬ್‌ ಸಿಂಗ್‌ ಅವರು 2016ರಲ್ಲಿ ಈಸ್ಟ್ ಬೆಂಗಾಲ್ ತಂಡದೊಂದಿಗೆ ಪದಾರ್ಪಣೆ ಮಾಡಿದ್ದರು. ಐ–ಲೀಗ್‌ ಟೂರ್ನಿಯ ಮೂರು ಆವೃತ್ತಿಗಳಲ್ಲಿ ಆ ತಂಡದ ಪರ ಆಡಿದ್ದಾರೆ. 2018–19ರ ಋತುವಿನ ಮಧ್ಯದಲ್ಲಿ ಗೋಕುಲಂ ಕೇರಳ ಪರವೂ ಕಣಕ್ಕಿಳಿದಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು