ನವದೆಹಲಿ: ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ನ (ಎಐಎಫ್ಎಫ್) ವಾರ್ಷಿಕ ಸಾಮಾನ್ಯ ಸಭೆ ಸೋಮವಾರ ವರ್ಚುವಲ್ ಆಗಿ ನಡೆಯಲಿದ್ದು ಪದಾಧಿಕಾರಿಗಳ ಚುನಾವಣೆ ನಡೆಸದೇ ಇರಲು ನಿರ್ಧರಿಸಲಾಗಿದೆ. ಆದರೆ ಚುನಾವಣೆಗೆ ಸಂಬಂಧಿಸಿದ ಫಿಫಾದ ನಡೆ ಕುತೂಹಲ ಕೆರಳಿಸಿದೆ.

ಈಗಿನ ಪದಾಧಿಕಾರಿಗಳ ನಾಲ್ಕು ವರ್ಷಗಳ ಅವಧಿ ಸೋಮವಾರ ಮುಕ್ತಾಯಗೊಳ್ಳಲಿದೆ. ಸಾಮಾನ್ಯವಾಗಿ ಇಂಥ ಸಂದರ್ಭದಲ್ಲಿ ಅವಧಿ ಮುಗಿಯುವ ದಿನವೇ ಚುನಾವಣೆ ನಡೆಯುತ್ತದೆ. ಹಾಲಿ ಅಧ್ಯಕ್ಷರಾಗಿರುವ ಪ್ರಫುಲ್ ಪಟೇಲ್ ಅವರಿಗೆ ಕ್ರೀಡಾನೀತಿಯ ಪ್ರಕಾರ ಈ ಬಾರಿ ಸ್ಪರ್ಧಿಸಲು ಅವಕಾಶವಿಲ್ಲ. ಕಳೆದ ತಿಂಗಳು ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದ್ದ ಎಐಎಫ್ಎಫ್ ಈಗಿನ ಕಾರ್ಯಕಾರಿ ಸಮಿತಿಯನ್ನು ಮುಂದುವರಿಸಲು ಅವಕಾಶ ನೀಡುವಂತೆ ಕೋರಿತ್ತು. ಆಡಳಿತಾಧಿಕಾರಿಗೆ ಇನ್ನೂ ಚುಣಾವಣೆಯ ರೂಪುರೇಷೆ ಸಿದ್ಧಗೊಳಿಸಲು ಆಗಲಿಲ್ಲ ಎಂದು ಅದು ಹೇಳಿತ್ತು. ಈ ಅರ್ಜಿ ಇನ್ನೂ ವಿಚಾರಣೆಗೆ ಬಂದಿಲ್ಲ ಎಂದು ಎಐಎಫ್ಎಫ್ ಮೂಲಗಳು ತಿಳಿಸಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಫಿಫಾ ವಕ್ತಾರರು ಫಿಫಾ ನಿಯಮದ ವಿಧಿ 14ರ ಪ್ರಕಾರ ಎಐಎಫ್ಎಫ್ ತನ್ನ ಬದ್ಧತೆಯನ್ನು ತೋರಿಸಬೇಕಾಗಿದೆ ಎಂದಷ್ಟೇ ಏಳಿದರು.

ಸುಪ್ರೀಂ ಕೋರ್ಟ್ 2017ರಲ್ಲಿ ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಖುರೇಷಿ ಮತ್ತು ಭಾಸ್ಕರ್ ಗಂಗೂಲಿ ಅವರನ್ನು ಒಳಗೊಂಡ ಆಡಳಿತ ಸಮಿತಿಯನ್ನು ನೇಮಕ ಮಾಡಿತ್ತು. ಆದರೆ ಚುನಾವಣೆಗೆ ಸಂಬಂಧಿಸಿದ ಕಾಗದಪತ್ರಗಳನ್ನು ಸಿದ್ಧಪಡಿಸಲಾಗಿದೆ ಎಂದೂ ಚುನಾವಣೆ ಮುಂದೂಡಲು ಮನವಿ ಮಾಡಿಕೊಂಡಿಲ್ಲವೆಂದೂ ಖುರೇಷಿ ಹೇಳಿದ್ದಾರೆ. ಈ ನಡುವೆ ಭಾರತ ತಂಡದ ಮಾಜಿ ಗೋಲ್ ಕೀಪರ್ ಕಲ್ಯಾಣ್ ಚೌಬೆ ಆದಷ್ಟು ಬೇಗ ಚುನಾವಣೆ ನಡೆಸಲು ಆದೇಶ ನೀಡಬೇಕು ಎಂದು ಕೋರಿ ಸುಪ್ರೀಂ ಕೊರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.

ಕ್ರೀಡಾನೀತಿಯ ಪ್ರಕಾರ ರಾಷ್ಟ್ರೀಯ ಕ್ರೀಡಾ ಫೆಡರೇಷನ್ನ ಅಧ್ಯಕ್ಷರು ಗರಿಷ್ಠ ಮೂರು ಅವಧಿಯ 12 ವರ್ಷ ಸ್ಥಾನದಲ್ಲಿ ಮುಂದುವರಿಯಬಹುದು. ದೀರ್ಘಕಾಲ ಅಧ್ಯಕ್ಷರಾಗಿದ್ದ ಪ್ರಿಯರಂಜನ್ ದಾಸ್ ಮುನ್ಶಿ ಅವರಿಗೆ ಹೃದಯಸ್ತಂಭನವಾದ ನಂತರ 2008ರಲ್ಲಿ ಮಾಜಿ ಸಚಿವ ಪ್ರಫುಲ್ ಪಟೇಲ್ ಎಐಎಫ್ಎಫ್ ಹಂಗಾಮಿ ಅಧ್ಯಕ್ಷರಾಗಿದ್ದರು. 2009ರ ಅಕ್ಟೋಬರ್ನಲ್ಲಿ ಪೂರ್ಣಾವಧಿಯ ಅಧ್ಯಕ್ಷರಾದರು. 2012 ಮತ್ತು 2016ರಲ್ಲಿ ಪುನಾರಾಯ್ಕೆಯಾಗಿದ್ದಾರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.