ಭುವನೇಶ್ವರ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಆಡುವ ಒಡಿಶಾ ಎಫ್‌ಸಿ ತಂಡವು ಗೋಲ್‌ಕೀಪರ್ ರವಿಕುಮಾರ್ ಜೊತೆ ಒಪ್ಪಂದ ಮಾಡಿಕೊಂಡಿದೆ.

26 ವರ್ಷ ವಯಸ್ಸಿನ ರವಿಕುಮಾರ್ ಅವರು ಮುಂದಿನ ಎರಡು ವರ್ಷಗಳ ಕಾಲ ಒಡಿಶಾ ತಂಡದಲ್ಲಿ ಆಡಲಿದ್ದಾರೆ.

ಐಎಸ್‌ಎಲ್ ಎರಡನೇ ಆವೃತ್ತಿಯಲ್ಲಿ ಡೆಲ್ಲಿ ಡೈನಾಮೊಸ್ ತಂಡದಲ್ಲಿದ್ದ ರವಿ, ಅದಕ್ಕೂ ಮುನ್ನ ಇಂಡಿಯನ್ ಆ್ಯರೋಸ್ ಹಾಗೂ ಸ್ಪೋರ್ಟಿಂಗ್ ಕ್ಲಬ್ ಡಿ ಗೋವಾ ಕ್ಲಬ್‌ಗಳ ಪರ ಆಡಿದ್ದರು.

ನಾರ್ತ್‌ಈಸ್ಟ್ ಯುನೈಟೆಡ್ (2017–18ನೇ ಆವೃತ್ತಿ) ಹಾಗೂ ಮುಂಬೈ ಸಿಟಿ ಎಫ್‌ಸಿ (2018–19) ಪರ ಆಡಿದ ಅನುಭವವೂ ಅವರಿಗಿದೆ.

ಉತ್ತರ ಪ್ರದೇಶದ ರವಿ ಅವರು ಐ ಲೀಗ್‌ನಲ್ಲಿ ಮಿನರ್ವ ಪಂಜಾಬ್ ಎಫ್‌ಸಿ ತಂಡದ ಪರ ಕಣಕ್ಕಿಳಿದಿದ್ದರು.

‘ಒಡಿಶಾ ಎಫ್‌ಸಿ ತಂಡದ ಜೊತೆಗೆ ಒಪ್ಪಂದ ಮಾಡಿಕೊಂಡಿರುವುದು ಖುಷಿ ನೀಡಿದೆ. ತಂಡ ಸೇರಲು ತುದಿಗಾಲಿನಲ್ಲಿ ನಿಂತಿದ್ದೇನೆ. ತಂಡದ ಯಶಸ್ಸಿಗಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ’ ಎಂದು ರವಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.