ಗುರುವಾರ , ನವೆಂಬರ್ 26, 2020
20 °C

ರೊನಾಲ್ಡೊ ಕೋವಿಡ್‌ನಿಂದ ಚೇತರಿಕೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಟುರಿನ್‌, ಇಟಲಿ: ಪೋರ್ಚುಗಲ್‌ ಹಾಗೂ ಯುವೆಂಟಸ್‌ ಫುಟ್‌ಬಾಲ್‌ ಕ್ಲಬ್‌ನ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಕೊರೊನಾವೈರಸ್‌ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಕೋವಿಡ್‌–19 ಪಿಡುಗಿಗೆ ತುತ್ತಾದ ಬಳಿಕ ಯುವೆಂಟಸ್‌ ಆಡಿದ ಮೂರು ಪಂದ್ಯಗಳಲ್ಲಿ ಅವರು ಕಣಕ್ಕಿಳಿದಿರಲಿಲ್ಲ. ಭಾನುವಾರ ನಡೆಯುವ ಸೀರಿ ಎ ಟೂರ್ನಿಯ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ.

ರೊನಾಲ್ಡೊ ಅವರು ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಿದ್ದು ಫಲಿತಾಂಶ ‘ನೆಗೆಟಿವ್‌‘ ಬಂದಿದೆ. ಈಗ ಅವರು ಪ್ರತ್ಯೇಕವಾಸದಿಂದ ಹೊರಬಂದಿದ್ದಾರೆ‘ ಎಂದು ಯುವೆಂಟಸ್‌ ಕ್ಲಬ್‌ನ ಮೂಲಗಳು ತಿಳಿಸಿವೆ.

ರಾಷ್ಟ್ರೀಯ ತಂಡ ಪೋರ್ಚುಗಲ್‌ ಪರ ಅಂತರರಾಷ್ಟ್ರೀಯ ಪಂದ್ಯದಲ್ಲಿ ಕಣಕ್ಕಿಳಿದ ಸಂದರ್ಭದಲ್ಲಿ ರೊನಾಲ್ಡೊ ಅವರಲ್ಲಿ ಕೋವಿಡ್‌ ಕಾಣಿಸಿಕೊಂಡಿತ್ತು.

ಸೀರಿ ಎ ಟೂರ್ನಿಯಲ್ಲಿ ಯುವೆಂಟಸ್‌ ತಂಡವು ಕ್ರೊಟೊನ್‌ ಹಾಗೂ ಹೆಲ್ಲಾಸ್‌ ವೆರೊನಾ ತಂಡಗಳ ವಿರುದ್ಧ ಆಡಿದ ಪಂದ್ಯಗಳಲ್ಲಿ ಮತ್ತು ಚಾಂಪಿಯನ್ಸ್ ಲೀಗ್‌ನಲ್ಲಿ ಬಾರ್ಸಿಲೋನಾ ಎದುರು ಆಡಿದ ಪಂದ್ಯದಲ್ಲಿ ರೊನಾಲ್ಡೊ ಇರಲಿಲ್ಲ.

ಐದು ಬಾರಿ ಬ್ಯಾಲನ್‌ ಡಿ ಒರ್‌ ಪ್ರಶಸ್ತಿ ಗೆದ್ದಿರುವ ರೊನಾಲ್ಡೊ, ಕೋವಿಡ್‌ ಪತ್ತೆಯಾದ ಬಳಿಕ ಟುರಿನ್‌ನ ತಮ್ಮ ನಿವಾಸದಲ್ಲಿ ಕ್ವಾರಂಟೈನ್‌ನಲ್ಲಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು