ಶನಿವಾರ, ನವೆಂಬರ್ 26, 2022
19 °C

ಸೌದಿಯ ಶಹರಾನಿಗೆ ಶಸ್ತ್ರಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಿಯಾದ್(ಎಎಫ್‌ಪಿ): ಅರ್ಜೆಂಟೀನಾ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಸೌದಿ ಅರೇಬಿಯಾ ತಂಡದ ಡಿಫೆಂಡರ್ ಯಾಸಿರ್ ಅಲ್ ಶಹರಾನಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. 

ಪಂದ್ಯದಲ್ಲಿ ಯಾಸಿರ್ ಅವರು ಇನ್ನೊಬ್ಬ ಆಟಗಾರನಿಗೆ ಡಿಕ್ಕಿ ಹೊಡೆದಿದ್ದರು.  ಆಗ ಅವರ ತಲೆಗೆ ಬಲವಾದ ಪೆಟ್ಟು ಬಿದ್ದು ಕುಸಿದಿದ್ದರು. 

‘ಅವರ ಆರೋಗ್ಯ ಸ್ಥಿರವಾಗಿದೆ. ಎದೆ ಹಾಗೂ ತಲೆಗೆ ಪೆಟ್ಟು ಬಿದ್ದಿದ್ದು ಶಸ್ತ್ರಚಿಕಿತ್ಸೆ ನೀಡಲಾಗಿದೆ’ ಎಂದು ವೈದ್ಯರ ತಂಡದ ಮೂಲಗಳು ತಿಳಿಸಿವೆ. ಈ ಪಂದ್ಯದಲ್ಲಿ ಸೌದಿ ತಂಡವು ಅರ್ಜೆಂಟೀನಾಗೆ ಸೋಲಿನ ಆಘಾತ ನೀಡಿತ್ತು. 

ಡೆನ್ಮಾರ್ಕ್‌ನ ಥಾಮಸ್‌ ಡೆಲನೇಗೆ ಗಾಯ; ದೋಹಾ (ರಾಯಿಟರ್ಸ್): ಡೆನ್ಮಾರ್ಕ್ ತಂಡದ ಮಿಡ್‌ಫೀಲ್ಡರ್ ಥಾಮಸ್ ಡೆಲನೇ ಅವರ ಮೊಣಕಾಲಿಗೆ ಗಂಭೀರ ಗಾಯವಾಗಿದ್ದು ವಿಶ್ವಕಪ್ ಟೂರ್ನಿಯಿಂದ  ನಿರ್ಗಮಿಸಿದ್ದಾರೆ.

ಡಿ ಗುಂಪಿನಲ್ಲಿ ಟ್ಯುನಿಷಿಯಾ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಅವರ ಮೊಣಕಾಲಿಗೆ ಪೆಟ್ಟಾಗಿತ್ತು. ಅವರಿಗೆ ನಾಲ್ಕು ವಾರಗಳ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು