3

ಸೆನೆಗಲ್‌, ಕೊಲಂಬಿಯಾಗೆ ಪ್ರೀ ಕ್ವಾರ್ಟರ್‌ ಕನಸು

Published:
Updated:
ಕೊಲಂಬಿಯಾ ಎದುರಿನ ಪಂದ್ಯದಲ್ಲಿ ಸೆನೆಗಲ್ ತಂಡದ ಆಟಗಾರರು ಗೆಲುವಿನ ಭರವಸೆಯಲ್ಲಿದ್ದಾರೆ ರಾಯಿಟರ್ಸ್ ಚಿತ್ರ

ಸಮಾರ (ಎಎಫ್‌ಪಿ): ಗುರುವಾರ ನಡೆಯಲಿರುವ ‘ಎಚ್‌’ ಗುಂಪಿನ ನಿರ್ಣಾಯಕ ಪಂದ್ಯದಲ್ಲಿ ಕಣಕ್ಕೆ ಇಳಿಯಲಿರುವ ಸೆನೆಗಲ್ ಮತ್ತು ಕೊಲಂಬಿಯಾ ತಂಡಗಳು ಪ್ರೀ ‌ಕ್ವಾರ್ಟರ್ ಫೈನಲ್‌ ಮೇಲೆ ಕಣ್ಣಿಟ್ಟಿವೆ.

ಕಳೆದ ಪಂದ್ಯದಲ್ಲಿ ಜಪಾನ್‌ ಜೊತೆ 2–2 ಡ್ರಾ ಸಾಧಿಸಿರುವ ಸೆನೆಗಲ್‌ ಈಗ ಲಯಕ್ಕೆ ಮರಳುವ ತವಕದಲ್ಲಿದೆ. ಆದರೆ ಪೋಲೆಂಡ್‌ ವಿರುದ್ಧ ಕಳೆದ ಪಂದ್ಯದಲ್ಲಿ 3–1ರಿಂದ ಗೆದ್ದಿರುವ ಕೊಲಂಬಿಯಾ ತಂಡವನ್ನು ಸೋಲಿಸುವುದು ಸುಲಭವಲ್ಲ.

ಎರಡನೇ ಸುತ್ತಿನ ಪಂದ್ಯಗಳು ಮುಗಿದಾಗ ಜಪಾನ್‌ ಮತ್ತು ಸೆನೆಗಲ್‌ ಖಾತೆಯಲ್ಲಿ ತಲಾ ನಾಲ್ಕು ಪಾಯಿಂಟ್‌ಗಳಿದ್ದು ಮೂರು ಪಾಯಿಂಟ್ ಹೊಂದಿರುವ ಕೊಲಂಬಿಯಾ ಮೂರನೇ ಸ್ಥಾನದಲ್ಲಿದೆ. ಪೋಲೆಂಡ್ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ.

ಗುರುವಾರದ ಪಂದ್ಯದಲ್ಲಿ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಲು ಸೆನೆಗಲ್‌ ತಂಡ ಪ್ರಯತ್ನಿಸಲಿದೆ. ಆದರೆ ಗೆಲುವು ದಾಖಲಿಸಿ 16ರ ಘಟ್ಟಕ್ಕೇರಲು ಕೊಲಂಬಿಯಾ ಶ್ರಮಿಸಲಿದೆ. ಹೀಗಾಗಿ ಈ ಪಂದ್ಯ ರೋಚಕವಾಗುವ ನಿರೀಕ್ಷೆ ಇದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !