ಕಾಲ್ಚಳಕದ ಮೋಡಿ ಮಾಡಿದ ಹಿರಿಯರು

7
ವಯಸ್ಸು ಮರೆತು ಫುಟ್‌ಬಾಲ್ ಆಡಿದ ಐಟಿಐ–ಎಚ್‌ಎಎಲ್‌ ತಂಡಗಳ ಆಟಗಾರರು

ಕಾಲ್ಚಳಕದ ಮೋಡಿ ಮಾಡಿದ ಹಿರಿಯರು

Published:
Updated:

ಬೆಂಗಳೂರು: ಮಿರುಗುವ ಬೆಳ್ಳಿಕೂದಲು, ಬಿಳಿ ಗಡ್ಡ. ದೇಹಕ್ಕೆ ವಯಸ್ಸಾಗಿದ್ದರೂ ದೇಹಭಾಷೆಯಲ್ಲಿ ತುಳುಕಿದ ಯೌವನ. ತುಡಿಯುವ ಉತ್ಸಾಹ; ಮನಸ್ಸಿನಲ್ಲಿ ಉಲ್ಲಾಸ.

ಅಶೋಕ ನಗರದ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ನಡೆದ ಹಿರಿಯರ ಫುಟ್‌ಬಾಲ್‌ ಪಂದ್ಯದಲ್ಲಿ ಆಡಿದ ಹಿರಿಯರು ವಯಸ್ಸು ಮರೆತು ಸಾಮರ್ಥ್ಯ ಮೆರೆದರು. ಗ್ಯಾಲರಿಗಳಲ್ಲಿ ಕುಳಿತಿದ್ದ ಆಯಾ ಕಂಪನಿಗಳ ಬೆಂಬಲಿಗರು ಮತ್ತು ಆಟಗಾರರ ಅಭಿಮಾನಿಗಳು ಕ್ಷಣ ಕ್ಷಣವೂ ಕುಣಿದು ಕುಪ್ಪಳಿಸಿದರು.

ಪ್ರತಿ ವರ್ಷ ನಡೆಯುವ ಹಿರಿಯರ ಫುಟ್‌ಬಾಲ್ ಪಂದ್ಯವನ್ನು ಈ ವರ್ಷ ದೊಡ್ಡ ಮಟ್ಟದಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ (ಎಚ್‌ಎಎಲ್) ಮತ್ತು ಇಂಡಿಯನ್ ಟೆಲಿಫೋನ್ ಇಂಡಸ್ಟ್ರಿ (ಐಟಿಐ) ತಂಡಗಳ ನಡುವಿನ ಪಂದ್ಯ ಆರಂಭದಿಂದ ಅಂತ್ಯದ ವರೆಗೂ ರೋಮಾಂಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ದ್ವಿತೀಯಾರ್ಧದಲ್ಲಿ ಗೋಲುಗಳನ್ನು ದಾಖಲಿಸಿದ ಐಟಿಐ ಗೆಲುವು ಸಾಧಿಸಿತು.

ವಿಜಯಿ ತಂಡಕ್ಕೆ ₹ 25 ಸಾವಿರ ಮತ್ತು ಸೋತ ತಂಡಕ್ಕೆ ₹ 15 ಸಾವಿರ ನೀಡಲಾಯಿತು. ವೈಯಕ್ತಿಕ ಪ್ರಶಸ್ತಿಗಳನ್ನು ಗೆದ್ದ ಆಟಗಾರರ ಸಂಭ್ರಮ ಇಮ್ಮಡಿಯಾಯಿತು.

ಗೋಲು ಗಳಿಸಿದ ಪ್ರಕಾಶ್‌: ಅನುಭವಿ ಆಟಗಾರರನ್ನು ಒಳಗೊಂಡ ಉಭಯ ತಂಡಗಳು ಆರಂಭದಿಂದಲೇ ಭಾರಿ ಪೈಪೋಟಿ ನಡೆಸಿದವು. ತಂತ್ರಕ್ಕೆ ಪ್ರತಿ ತಂತ್ರ ಹೂಡುತ್ತ ಸಾಗಿದ ಕಾರಣ ಮೊದಲಾರ್ಧದಲ್ಲಿ ಯಾವ ತಂಡಕ್ಕೂ ಗೋಲು ಗಳಿಸಲು ಆಗಲಿಲ್ಲ.

ದ್ವಿತೀಯಾರ್ಧದಲ್ಲಿ ಫಾರ್ವರ್ಡ್ ಆಟಗಾರ ಆರ್‌.ಸಿ.ಪ್ರಕಾಶ್ ಮಿಂಚಿದರು. 45ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದ ಅವರು 15 ನಿಮಿಷಗಳ ಒಳಗೆ ಮತ್ತೊಮ್ಮೆ ಚೆಂಡನ್ನು ಗುರಿ ಮುಟ್ಟಿಸಿ ಐಟಿಐ ತಂಡದಲ್ಲಿ ಸಂಭ್ರಮದ ಅಲೆ ಎಬ್ಬಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !