ಭಾನುವಾರ, ಜೂನ್ 20, 2021
29 °C

ಯಶಸ್ಸಿಗೆ ಬೇಕು ‘ಸಿಕ್ಸ್ತ್‌ ಸೆನ್ಸ್‌’: ಭುಟಿಯಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಯಶಸ್ವಿ ಆಟಗಾರನಾಗಲು ‘ಸಿಕ್ಸ್ತ್ ಸೆನ್ಸ್‌’ ಬೆಳೆಸಿಕೊಳ್ಳುವುದು ಅವಶ್ಯಕ ಎಂದು ಭಾರತದ ಫುಟಬಾಲ್ ದಿಗ್ಗಜ ಬೈಚುಂಗ್‌ ಭುಟಿಯಾ ಅಭಿಪ್ರಾಯಪಟ್ಟಿದ್ದಾರೆ. ನಿಯಮಿತವಾಗಿ ಗೋಲು ಗಳಿಸಲು ಅಂತಹ ಸಂವೇದನೆ ಇರಬೇಕು ಎಂದು ಅವರು ಹೇಳಿದ್ದಾರೆ.

'ಗೋಲು ಗಳಿಸುವ ಅವಕಾಶವನ್ನು ಅರಿಯುವವರು ಮಾತ್ರ ಯಶಸ್ವಿ ಆಟಗಾರನಾಗಲು ಸಾಧ್ಯ‘ ಎಂದು ಎಐಎಫ್‌ಎಫ್‌ ಟಿವಿಯೊಂದಿಗೆ ನಡೆಸಿದ ಸಂವಾದದಲ್ಲಿ ಭುಟಿಯಾ ಹೇಳಿದ್ದಾರೆ.

ತಮ್ಮ ಕಾಲ್ಚಳಕದ ಚಾಕಚಕ್ಯತೆಯ ಕಾರಣ 'ಸಿಕ್ಕಿಮೀಸ್‌ ಸ್ನೈಪರ್‌‘ ಎಂದು ಹೆಸರಾಗಿರುವ ಭುಟಿಯಾ, ಭಾರತ ತಂಡದ ಪರ 100ಕ್ಕಿಂತ ಹೆಚ್ಚು (104) ಅಂತರರಾಷ್ಟ್ರೀಯ ಪ‍ಂದ್ಯಗಳಲ್ಲಿ ಆಡಿದ ಮೊದಲ ಆಟಗಾರನಾಗಿದ್ದಾರೆ.

'ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಈ ಸಿಕ್ಸ್ತ್‌ ಸೆನ್ಸ್‌ ಇರುತ್ತದೆ. ಪಂದ್ಯದಲ್ಲಿ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಅಗತ್ಯ' ಎಂದು ಭುಟಿಯಾ ಹೇಳಿದರು.

'ಗೋಲು ಗಳಿಕೆಯೊಂದೇ ಬೈಚುಂಗ್‌ ಭಾಯ್‌ ಅವರ ಜೀವನದಲ್ಲಿ ಮಹತ್ವದ ಸಂಗತಿಯಾಗಿತ್ತು' ಎಂಬ ಭಾರತ ಫುಟ್‌ಬಾಲ್‌ ತಂಡದ ನಾಯಕ ಸುನಿಲ್‌ ಚೆಟ್ರಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಭುಟಿಯಾ, ಗೋಲು ಗಳಿಕೆಗಾಗಿ ಓಡುವ ಓಟದ ಮಹತ್ವದ ಬಗ್ಗೆ ಒತ್ತಿ ಹೇಳಿದರು.

'ಪಂದ್ಯದ ವೇಳೆ ಗೋಲು ಗಳಿಕೆಗಾಗಿ ಓಡುವ ಓಟ ಆಟಗಾರನಿಗೆ ಅತ್ಯಂತ ಮಹತ್ವದ್ದು. ಯಾವ ಭಾಗದಿಂದ ಗೋಲು ಗಳಿಕೆ ಸಾಧ್ಯ ಎಂಬುದನ್ನು ಗ್ರಹಿಸುವುದು ಮುಖ್ಯ ಎಂದು ನಾನು ಸುನಿಲ್‌ಗೆ ಹೇಳುತ್ತಿರುತ್ತೇನೆ. ದೀರ್ಘ ದೂರದವರೆಗೆ ಓಡಬೇಕಾದಾಗ ಡ್ರಿಬ್ಲಿಂಗ್‌ ಮಾಡಬೇಕಾಗುತ್ತದೆ. ಡಿಫೆಂಡರ್‌ನನ್ನು ವಂಚಿಸಿ ಮುಂದೆ ಸಾಗಬೇಕಾಗುತ್ತದೆ' ಎಂದು ಭುಟಿಯಾ ವಿವರಿಸಿದರು.

'10 ಸಂದರ್ಭಗಳ ಪೈಕಿ ಒಂದು ಅಥವಾ ಎರಡರಲ್ಲಿ ನಿಮಗೆ ಗೋಲು ಗಳಿಕೆಯ ಅವಕಾಶ ಸಿಗಬಹುದು. ಆದರೆ ಈ ಹಂತದಲ್ಲಿ ಪ್ರಯತ್ನವನ್ನು ಮಾತ್ರ ಬಿಡಬಾರದು' ಎಂದು ಭುಟಿಯಾ ಕಿವಿಮಾತು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು