ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

FIFA 2022: ಫ್ರಾನ್ಸ್‌ಗೆ ಆಘಾತ ನೀಡಿದ ಟುನೀಷಿಯಾ

ಕತಾರ್‌ನಲ್ಲಿ ‘ಹಾಲಿ ಚಾಂಪಿಯನ್‌’ಗೆ ಸೋಲುಣಿಸಿ ನಿರ್ಗಮಿಸಿದ ತಂಡ
Last Updated 1 ಡಿಸೆಂಬರ್ 2022, 5:48 IST
ಅಕ್ಷರ ಗಾತ್ರ

ಅಕ್ ರಯಾನ್ (ರಾಯಿಟರ್ಸ್): ಫ್ರೆಂಚ್‌ ಮೂಲದ ವಹಾಬಿ ಖಾಜ್ರಿ ಬುಧವಾರ ಎಜುಕೇಷನ್ ಸಿಟಿ ಕ್ರೀಡಾಂಗಣದಲ್ಲಿ ಗಳಿಸಿದ ಏಕೈಕ ಗೋಲಿನಿಂದಾಗಿ ಟುನೀಷಿಯಾ ತಂಡವು ‘ಹಾಲಿ ಚಾಂಪಿಯನ್‌’ ಫ್ರಾನ್ಸ್‌ಗೆ ಸೋಲಿನ ಆಘಾತ ನೀಡಿತು.

ಆದರೆ ಈ ಅಮೋಘ ಜಯ ಗಳಿಸಿದ ನಂತರವೂ ಟುನೀಷಿಯಾ ತಂಡಕ್ಕೆ ನಾಕೌಟ್ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಡಿ ಗುಂಪಿನ ಮೊದಲೆರಡು ಪಂದ್ಯಗಳಲ್ಲಿ ಗೆದ್ದಿದ್ದ ಫ್ರಾನ್ಸ್‌ ಪಡೆಯು ಈಗಾಗಲೇ 16ರ ಘಟ್ಟ ಪ್ರವೇಶಿಸಿದೆ.

ಪಂದ್ಯದ 58ನೇ ನಿಮಿಷದಲ್ಲಿ ವಹಾಬಿ ಅವರು ಗಳಿಸಿದ ಗೋಲು ಅಮೋಘವಾಗಿತ್ತು. ವಹಾಬಿ ಅವರು ಫ್ರಾನ್ಸ್‌ನಲ್ಲಿ ಜನಿಸಿದವರು. ಸದ್ಯ ಟುನೀಷಿಯಾ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಇಡೀ ಪಂದ್ಯದಲ್ಲಿ ಟುನೀಷಿಯಾದ ರಕ್ಷಣಾ ಆಟಗಾರರ ಪಡೆಯು ಉತ್ತಮವಾಗಿ ಆಡಿತು. ಅದರಿಂದಾಗಿ ಫ್ರಾನ್ಸ್‌ ಆಟಗಾರರಿಗೆ ಒಂದೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ.

16ರ ಹಂತಕ್ಕೆ ಆಸ್ಟ್ರೇಲಿಯಾ

ಅಲ್‌ ವಾಕ್ರಾ(ರಾಯಿಟರ್ಸ್): ಆಸ್ಟ್ರೇಲಿಯಾ ತಂಡವು 16 ವರ್ಷಗಳ ನಂತರ ಫಿಫಾ ವಿಶ್ವಕಪ್ ಟೂರ್ನಿಯ 16ರ ಘಟ್ಟವನ್ನು ಪ್ರವೇಶಿಸಿತು.

ಬುಧವಾರ ಅಲ್ ಜನಾಬ್ ಕ್ರೀಡಾಂಗಣದಲ್ಲಿ ನಡೆದ ಡಿ ಗುಂಪಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 1–0ಯಿಂದ ಡೆನ್ಮಾರ್ಕ್ ತಂಡವನ್ನು ಸೋಲಿಸಿತು. ಇದರೊಂದಿಗೆ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ನಾಕೌಟ್‌ಗೆ ರಹದಾರಿ ಪಡೆಯಿತು.

ಆರಂಭದಿಂದಲೂ ಉಭಯ ಆಟಗಾರರು ಜಿದ್ದಾಜಿದ್ದಿನ ಹೋರಾಟ ನಡೆಸಿದರು. ಇದರಿಂದಾಗಿ ಮೊದಲ ಒಂದು ತಾಸಿನಲ್ಲಿ ಒಂದೂ ಗೋಲು ದಾಖಲಾಗಲಿಲ್ಲ. ಆದರೆ 60ನೇ ನಿಮಿಷದಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಲಾಕಿ ತೋರಿದ ಕಾಲ್ಚಳಕ ಸಫಲವಾಯಿತು.

ಡೆನ್ಮಾರ್ಕ್‌ನ ರಕ್ಷಣಾ ಪಡೆಯನ್ನು ಮೀರಿ ನಿಂತರು. ನಂತರದ ಅವಧಿಯಲ್ಲಿ ಉಭಯ ತಂಡಗಳಿಂದ ಗೋಲುಗಳು ದಾಖಲಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT