ಭಾನುವಾರ, ಅಕ್ಟೋಬರ್ 20, 2019
21 °C
ಬಾಂಗ್ಲಾ ವಿರುದ್ಧ ವಿಶ್ವಕಪ್‌ ಫುಟ್‌ಬಾಲ್‌ ಕ್ವಾಲಿಫೈಯರ್ಸ್ ಪಂದ್ಯ

ಫಿಫಾ ವಿಶ್ವಕಪ್‌ ಕ್ವಾಲಿಫೈಯರ್ಸ್ ಭಾರತ ತಂಡದಲ್ಲಿ ಕನ್ನಡಿಗ ನಿಖಿಲ್‌

Published:
Updated:
Prajavani

ಗುವಾಹಟಿ: ಕನ್ನಡಿಗ ನಿಖಿಲ್‌ ಪೂಜಾರಿ ಅವರು ಬಾಂಗ್ಲಾದೇಶ ತಂಡದ ವಿರುದ್ಧ ಆಡಲಿರುವ ಫಿಫಾ ವಿಶ್ವಕಪ್‌ ಕ್ವಾಲಿಫೈಯರ್ಸ್‌ ಪಂದ್ಯಕ್ಕೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 23 ಮಂದಿಯ ತಂಡವನ್ನು ಶನಿವಾರ ಪ್ರಕಟಿಸಲಾಯಿತು. ಕೋಲ್ಕತ್ತದಲ್ಲಿ ಮಂಗಳವಾರ ಪಂದ್ಯ ನಡೆಯಲಿದೆ.

ಡಿಫೆಂಡರ್‌ ಸಂದೇಶ್‌ ಜಿಂಗಾನ್‌ ಹಾಗೂ ಅನ್ವರ್‌ ಅಲಿ (ಜೂನಿಯರ್‌) ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದಾರೆ. ಹಾಲಿಚರಣ್‌ ನಾರ್ಜರಿ, ಫಾರೂಕ್‌ ಚೌಧರಿ ಹಾಗೂ ನಿಶು ಕುಮಾರ್‌ ಅವರಿಗೆ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ.

ತಂಡ: ಗೋಲ್‌ಕೀಪರ್ಸ್: ಗುರುಪ್ರೀತ್‌ ಸಿಂಗ್‌ ಸಂಧು, ಅಮರಿಂದರ್‌ ಸಿಂಗ್‌, ಕಮಲ್‌ಜೀತ್‌ ಸಿಂಗ್‌. ಡಿಫೆಂಡರ್ಸ್: ಪ್ರೀತಂ ಕೋಟಲ್‌, ರಾಹುಲ್‌ ಭೆಕೆ, ಆದಿಲ್‌ ಖಾನ್‌, ನರೇಂದರ್‌, ಸಾರ್ಥಕ್‌ ಗೋಲುಯ್‌, ಅನಾಸ್‌ ಎಡತೊಡಿಕಾ, ಮಂದಾರ್‌ ರಾವ್‌ ದೇಸಾಯಿ, ಸುಭಾಶಿಸ್‌ ಬೋಸ್‌.

ಮಿಡ್‌ಫೀಲ್ಡರ್ಸ್: ಉದಾಂತ್‌ ಸಿಂಗ್‌, ನಿಖಿಲ್‌ ಪೂಜಾರಿ, ವಿನೀತ್‌ ರಾಯ್‌, ಅನಿರುದ್ಧ ಥಾಪಾ, ಅಬ್ದುಲ್‌ ಸಹಲ್‌, ರೇನಿಯರ್‌ ಫರ್ನಾಂಡೀಸ್‌, ಬ್ರೆಂಡನ್‌ ಫರ್ನಾಂಡೀಸ್‌, ಲಾಲ್‌ ಲಿಯಾಂಜುವಾಲಾ ಚಾಂಗ್ಟೆ, ಆಶಿಕ್‌ ಕುರುನಿಯನ್‌. ಫಾರ್ವಡ್ಸ್: ಸುನೀಲ್‌ ಚೆಟ್ರಿ, ಬಲವಂತ್‌ ಸಿಂಗ್‌, ಮನ್‌ವೀರ್‌ ಸಿಂಗ್‌.

Post Comments (+)