ಬೆಂಗಳೂರು: ಎಂಇಜಿ ಆ್ಯಂಡ್ ಸೆಂಟರ್ ಮತ್ತು ಸ್ಟೂಡೆಂಟ್ಸ್ ಯೂನಿಯನ್ ನಡುವಣ ಸೂಪರ್ ಡಿವಿಷನ್ ಲೀಗ್ ಫುಟ್ಬಾಲ್ ಪಂದ್ಯ ಡ್ರಾ ಆಗಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಉಭಯ ತಂಡಗಳ ನಡುವಣ ಹೋರಾಟ 1–1 ಗೋಲುಗಳಿಂದ ಸಮಬಲವಾಯಿತು.

ಮೊದಲಾರ್ಧದ ಆರಂಭದ 20 ನಿಮಿಷಗಳಲ್ಲಿ ಎರಡೂ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಹೀಗಾಗಿ ಯಾವ ತಂಡಕ್ಕೂ ಗೋಲು ಗಳಿಸಲು ಆಗಲಿಲ್ಲ.

27ನೇ ನಿಮಿಷದಲ್ಲಿ ಸ್ಟೂಡೆಂಟ್ಸ್ ತಂಡಕ್ಕೆ ಯಶಸ್ಸು ಲಭಿಸಿತು. ಎಮಾನುಯೆಲ್ ಗೋಲು ಹೊಡೆದರು.

42ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಎಂಇಜಿ ತಂಡದ ರೇಗನ್ ಸಮಬಲಕ್ಕೆ ಕಾರಣರಾದರು.

ದ್ವಿತೀಯಾರ್ಧದಲ್ಲಿ ಉಭಯ ತಂಡಗಳು ಮುನ್ನಡೆಯ ಗೋಲು ಗಳಿಸಲು ಸಾಕಷ್ಟು ಶ್ರಮಿಸಿದವು. ಆದರೆ ಯಾರಿಗೂ ಯಶಸ್ಸು ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.