ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿಯರ ಫುಟ್‌ಬಾಲ್‌: ಕರ್ನಾಟಕ ತಂಡದ ಚಾರಿತ್ರಿಕ ಸಾಧನೆ

ಸಬ್‌ ಜೂನಿಯರ್ ರಾಷ್ಟ್ರೀಯ ಬಾಲಕಿಯರ ಫುಟ್‌ಬಾಲ್‌
Published 24 ಸೆಪ್ಟೆಂಬರ್ 2023, 19:04 IST
Last Updated 24 ಸೆಪ್ಟೆಂಬರ್ 2023, 19:04 IST
ಅಕ್ಷರ ಗಾತ್ರ

ಬೆಳಗಾವಿ: ಕರ್ನಾಟಕ ತಂಡವು ಇಲ್ಲಿ ನಡೆದ 13 ವರ್ಷದೊಳಗಿನವರ ಸಬ್‌ ಜೂನಿಯರ್ ರಾಷ್ಟ್ರೀಯ ಬಾಲಕಿಯರ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಗೆಲುವು ಸಾಧಿಸಿತು.

ಫೈನಲ್‌ ಹಣಾಹಣಿಯಲ್ಲಿ ಕರ್ನಾಟಕ ತಂಡ 7–2 ಗೋಲುಗಳಿಂದ ಗೆಲುವು ಸಾಧಿಸಿತು. ಈ ಮೂಲಕ ರಾಜ್ಯ ಬಾಲಕಿಯರು ಈ ಟೂರ್ನಿಯಲ್ಲಿ ಮೊದಲ ಬಾರಿಗೆ ಟ್ರೋಫಿ ಎತ್ತಿ ಹಿಡಿದ ಸಾಧನೆ ಮಾಡಿದರು. ಕರ್ನಾಟಕ ರಾಜ್ಯ ಫುಟ್‌ಬಾಲ್‌ ಸಂಸ್ಥೆ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದೆ.

ಕರ್ನಾಟಕ ತಂಡವು ಪಂದ್ಯದ ಮೊದಲಾರ್ಧದಲ್ಲಿ ಆರು ಗೋಲುಗಳನ್ನು ಗಳಿಸಿ ಪ್ರಾಬಲ್ಯ ಸಾಧಿಸಿತು.  2ನೇ ನಿಮಿಷದಲ್ಲಿ ಎಚ್.ಯಾಶಿಕಾ ಗೋಲು ಗಳಿಸಿ ಖಾತೆ ತೆರೆದರು. 17ನೇ ನಿಮಿಷದಲ್ಲಿ ದೆಹಲಿ ತಂಡದ ವಂಶಿಕಾ ರಾವತ್ ಅವರು ಕರ್ನಾಟಕಕ್ಕೆ ‘ಉಡುಗೊರೆ’ ಗೋಲು ನೀಡಿದರು. ರಾಜ್ಯ ತಂಡದ ನಾಯಕಿ ಅದ್ವಿಕಾ ಕನೋಜಿಯಾ (22ನೇ ನಿ.), ರಿಯಾನಾ ಲಿಜ್ ಜಾಕೋಬ್ (32ನೇ ನಿ.), ಟಿ. ಕರಿಷ್ಮಾ ಲೋಯಿಸ್ (35ನೇ ನಿ.) ಹಾಗೂ  ಆದ್ಯಾ ಬಿಂಜೋಲಾ (43 ಮತ್ತು 53ನೇ ನಿ.) ಉಳಿದ ಗೋಲುಗಳನ್ನು ಗಳಿಸಿದರು.

ದೆಹಲಿ ತಂಡದ ಧ್ವನಿ ಬಿ.(44ನೇ ನಿ.), ನಾಯಕಿ ನೀತಿಕಾ ನೇಗಿ (58ನೇ ನಿ.) ತಲಾ ಒಂದು ಗೋಲು ಗಳಿಸಿದರು.  ಟೂರ್ನಿಯಲ್ಲಿ 12 ತಂಡಗಳು ಪಾಲ್ಗೊಂಡಿದ್ದವು. ಕರ್ನಾಟಕ ತಂಡ ಮಧ್ಯಪ್ರದೇಶ, ಜಮ್ಮು-ಕಾಶ್ಮೀರ, ಉತ್ತರ ಪ್ರದೇಶ ತಂಡಗಳ ವಿರುದ್ಧ ಗೆಲುವು ಸಾಧಿಸಿ ಹ್ಯಾಟ್ರಿಕ್‌ ಸಾಧಿಸಿತ್ತು. ಈಗ ನಾಲ್ಕನೇ ಗೆಲುವಿನ ಮೂಲಕ ಪ್ರಶಸ್ತಿ ತನ್ನದಾಗಿಸಿಕೊಂಡಿತು.

13 ವರ್ಷದೊಳಗಿನವರ ಸಬ್‌ ಜೂನಿಯರ್ ರಾಷ್ಟ್ರೀಯ ಬಾಲಕಿಯರ ಫುಟ್‌ಬಾಲ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದ ಕರ್ನಾಟಕ ತಂಡ
13 ವರ್ಷದೊಳಗಿನವರ ಸಬ್‌ ಜೂನಿಯರ್ ರಾಷ್ಟ್ರೀಯ ಬಾಲಕಿಯರ ಫುಟ್‌ಬಾಲ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದ ಕರ್ನಾಟಕ ತಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT