ಬೆಂಗಳೂರು: ಯಮನಮ್ ಕಮಲಾ ದೇವಿ ಗಳಿಸಿದ ‘ಹ್ಯಾಟ್ರಿಕ್’ ಗೋಲುಗಳ ಬಲದಿಂದ ಗೋಕುಲಂ ಕೇರಳ ಎಫ್‌ಸಿ ತಂಡ ರಾಷ್ಟ್ರೀಯ ಮಹಿಳಾ ಲೀಗ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ‘ಬಿ’ ಗುಂಪಿನ ಹಣಾಹಣಿಯಲ್ಲಿ ಗೋಕುಲಂ ತಂಡ 5–1 ಗೋಲುಗಳಿಂದ ಬೆಂಗಳೂರು ಯುನೈಟೆಡ್ ಎಫ್‌ಸಿ (ಬಿಯುಎಫ್‌ಸಿ) ತಂಡವನ್ನು ಮಣಿಸಿತು.

ಬಿಯುಎಫ್‌ಸಿ ತಂಡದ ಕೋಮಲಾ ಕುಮಾರಿ ಅವರು ಎರಡನೇ ನಿಮಿಷದಲ್ಲಿ ಚೆಂಡನ್ನು ತಮ್ಮದೇ ಗೋಲುಪೆಟ್ಟಿಗೆಯೊಳಗೆ ಒದ್ದರು. ಹೀಗಾಗಿ ಗೋಕುಲಂ ಖಾತೆಗೆ ‘ಉಡುಗೊರೆ’ ಗೋಲು ಸೇರ್ಪಡೆಯಾಯಿತು.

ನಾಲ್ಕನೇ ನಿಮಿಷದಲ್ಲಿ ಬಿಯುಎಫ್‌ಸಿ ತಂಡದ ಸತ್ಯವತಿ ಖಾಂಡಾ ಗೋಲು ಬಾರಿಸಿ 1–1 ಸಮಬಲಕ್ಕೆ ಕಾರಣರಾದರು.

ದ್ವಿತೀಯಾರ್ಧದಲ್ಲಿ ಗೋಕುಲಂ ತಂಡ ಪ್ರಾಬಲ್ಯ ಮೆರೆಯಿತು. 46ನೇ ನಿಮಿಷದಲ್ಲಿ ಸಬಿತ್ರಾ ಭಂಡಾರಿ ಗೋಲು ಹೊಡೆದು ತಂಡಕ್ಕೆ 2–1 ಮುನ್ನಡೆ ತಂದುಕೊಟ್ಟರು.

ನಂತರ ಕಮಲಾ ದೇವಿ ಕಾಲ್ಚಳಕ ತೋರಿದರು. ಅವರು 58, 59 ಮತ್ತು 90+3ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿ ಸಂಭ್ರಮಿಸಿದರು.

ದಿನದ ಇನ್ನೊಂದು ಪಂದ್ಯದಲ್ಲಿ ಒಡಿಶಾ ಎಫ್‌ಸಿ 6–0 ಗೋಲುಗಳಿಂದ ಬಿದೇಶ್ ಇಲೆವನ್ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಸೋಲಿಸಿತು.

ಒಡಿಶಾ ತಂಡದ ಜಾಬಮಣಿ ಸೋರೆನ್ 42, 54 ಮತ್ತು 67ನೇ ನಿಮಿಷಗಳಲ್ಲಿ ಗೋಲು ಬಾರಿಸಿ ‘ಹ್ಯಾಟ್ರಿಕ್’ ಸಾಧನೆ ಮಾಡಿದರು. ಆರತಿ ಅನಿಮಾ ಖಾಡಿಯಾ (24) ಹಾಗೂ ಟಿಕಿನಾ ಸಮಾಲ್ (36 ಮತ್ತು 84) ಅವರೂ ಗೋಲು ಬಾರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.