ಭುವನೇಶ್ವರ: ಅಮೋಘ ಆಟವಾಡಿದ ಎಫ್‌ಸಿ ಗೋವಾ ತಂಡ 2–1ರಿಂದಚೆನ್ನೈಯಿನ್ ಎಫ್‌ಸಿ ತಂಡವನ್ನು ಮಣಿಸಿ ಸೂಪರ್ ಕಪ್ ಗೆದ್ದಿತು.

ಕಳಿಂಗ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ ಹಣಾಹಣಿಯಲ್ಲಿ ಫೆರೆನ್ ಕೊರೊಮಿನಸ್ ಮತ್ತುರಫೆಲ್ ಆಗಸ್ಟೋ ಅವರ ಕಾಲ್ಚಳಕದಿಂದ ಅರಳಿದ ಗೋಲುಗಳಿಂದ ಗೋವಾ ಎಫ್‌ಸಿ ತಂಡಕ್ಕೆ ಚೊಚ್ಚಲ ಪ್ರಶಸ್ತಿ ಒಲಿಯಿತು.

ಎರಡೂ ತಂಡದ ಆಟಗಾರರು ಸಮಬಲದ ಹೋರಾಟ ನಡೆಸಿದರು.51ನೇ ನಿಮಿಷದಲ್ಲಿ ಫೆರೆನ್ ಕೊರೊಮಿನಸ್ ಗೋಲು ಬಾರಿಸಿಗೋವಾ ತಂಡದ ಮೇಲುಗೈಗೆ ಕಾರಣರಾದರು. ಮರು ನಿಮಿಷದಲ್ಲಿ ಚೆನ್ನೈಯಿನ್ ತಂಡದ ರಫೆಲ್ ಆಗಸ್ಟೋ ಅವರು ಗೋಲುಗಳಿಸಿ ತಿರುಗೇಟು ಕೊಟ್ಟರು. 64ನೇ ನಿಮಿಷದಲ್ಲಿ ಬ್ರಾಂಡನ್ ಫರ್ನಾಂಡಿಸ್ ಅವರು ಚುರುಕಿನ ಆಟವಾಡಿ ಚೆಂಡನ್ನು ಗೋಲಾಗಿಸಿದರು. ಗೋವಾ ಮುನ್ನಡೆಗೆ ಈ ಮೂಲಕ ನೆರವಾದರು.

ಚೆನ್ನೈಯಿನ್ ತಂಡದ ರಫೆಲ್ ಆಗಸ್ಟೋ, ಅನಿರುದ್ಧ್ ಥಾಪಾ ಮತ್ತು ಧನಪಾಲ್ ಗಣೇಶ್ ಮಿಡ್‌ಫೀಲ್ಡ್‌ನಲ್ಲಿಸಿಕ್ಕ ಅವಕಾಶ ಬಳಸಿಕೊಳ್ಳಲು ವಿಫಲರಾಗಿದ್ದು ಚೆನ್ನೈಯಿನ್‌ಗೆ ದುಬಾರಿಯಾಯಿತು. ಪಂದ್ಯದ ಕೊನೆವರೆಗೂ ಗೋವಾ ತಂಡದ ಗೋಲ್ ಕೀಪರ್ ಮೊಹಮದ್ ನವಾಜ್ ಅವರು ರಕ್ಷಣಾ ಗೋಡೆಯಂತೆ ನಿಂತು ಚೆನ್ನೈಯಿನ್ ತಂಡದ ಎಲಿ ಸಬಿಯ ಮತ್ತು ಆಗಸ್ಟೋ ಅವರ ಗೋಲು ಗಳಿಸುವ ಪ್ರಯತ್ನಗಳನ್ನು ವಿಫಲಗೊಳಿಸಿದರು. ಈ ಮೂಲಕ ‘ಹೀರೊ ಆಫ್ ದ ಮ್ಯಾಚ್’ ಗೌರವಕ್ಕೆ ಪಾತ್ರರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.