ಹುಬ್ಬಳ್ಳಿ: ನೂತನ ಕ್ರಿಕೆಟ್‌ ಮೈದಾನ ಲೋಕಾರ್ಪಣೆ

7

ಹುಬ್ಬಳ್ಳಿ: ನೂತನ ಕ್ರಿಕೆಟ್‌ ಮೈದಾನ ಲೋಕಾರ್ಪಣೆ

Published:
Updated:
Prajavani

ಹುಬ್ಬಳ್ಳಿ: ಇಲ್ಲಿನ ’ಭಾಣಜಿ ಡಿ. ಖಿಮಜಿ‘ ನೂತನ ಕ್ರಿಕೆಟ್‌ ಮೈದಾನವನ್ನು  ಹಿರಿಯ ಕ್ರಿಕೆಟಿಗ ಬ್ರಿಜೇಶ್‌ ಪಟೇಲ್ ಭಾನುವಾರ ಲೋಕಾರ್ಪಣೆ ಮಾಡಿದರು.

ಶಿರೂರು ಲೇ ಔಟ್‌ನ ಜೆ.ಕೆ. ಸ್ಕೂಲ್‌ ಸಮೀಪ 8.5 ಎಕರೆ ಜಾಗದಲ್ಲಿ ಮೈದಾನ ನಿರ್ಮಿಸಲಾಗಿದೆ. ಒಂದೇ ಬಾರಿಗೆ ಎರಡು ಪಂದ್ಯಗಳನ್ನು ನಡೆಸಲು ಅವಕಾಶವಿರುವುದು ಮೈದಾನದ ವಿಶೇಷತೆ.

ಹಲವಾರು ಕ್ರಿಕೆಟಿಗರನ್ನು ರಾಜ್ಯ ತಂಡಕ್ಕೆ ನೀಡಿರುವ ಬಿಡಿಕೆ ಸ್ಪೋರ್ಟ್ಸ್‌ ಫೌಂಡೇಷನ್‌ನ ಬೆಳ್ಳಿ ಮಹೋತ್ಸವ ಸಮಾರಂಭ ಕೂಡ ಇದೇ ವೇಳೆ ನಡೆಯಿತು. ಆಗ ಮಾತನಾಡಿದ ಬ್ರಿಜೇಶ್‌ ‘ಈ ಹಿಂದೆ ಕ್ರಿಕೆಟ್‌ ತರಬೇತಿ ಪಡೆಯಲು ಇಲ್ಲಿನ ಆಟಗಾರರು ಶಿಕ್ಷಣ, ಪೋಷಕರು ಎಲ್ಲವನ್ನು ಬಿಟ್ಟು ಬೆಂಗಳೂರಿಗೆ ಬರಬೇಕಿತ್ತು. ಇದನ್ನು ಅರಿತು ಕೆಎಸ್‌ಸಿಎ ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಕ್ರೀಡಾಂಗಣಗಳನ್ನು ನಿರ್ಮಿಸಿದೆ‘ ಎಂದರು.

’ಉತ್ತರ ಕರ್ನಾಟಕದಲ್ಲಿ ಪ್ರತಿಭಾವಂತ ಆಟಗಾರರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರಿಗೆ ಉತ್ತಮ ತರಬೇತಿ ನೀಡಲಾಗುತ್ತಿದೆ. ವಿವಿಧ ವಯೋಮಿತಿಯ ರಾಜ್ಯ ತಂಡಗಳಲ್ಲಿ ಬೆಂಗಳೂರು ಹೊರಗಿನವರೇ ಹೆಚ್ಚು ಆಟಗಾರರು ಇದ್ದಾರೆ‘ ಎಂದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !