ಮಂಗಳವಾರ, ಸೆಪ್ಟೆಂಬರ್ 21, 2021
22 °C
ಇದೇ 19ರಂದು ನಡೆಯಲಿರುವ ವಿಶ್ವ ಟೆನ್ ಕೆ ಓಟದ ಸ್ಪರ್ಧೆ

ಫಿನಿಷರ್ಸ್‌ ಟಿ ಶರ್ಟ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇದೇ 19ರಂದು ನಡೆಯಲಿರುವ ವಿಶ್ವ ಟೆನ್ ಕೆ ಓಟದ ಸ್ಪರ್ಧೆಯ ‘ಫಿನಿಷರ್ಸ್‌ ಟೀ ಶರ್ಟ್‌’ ಮಂಗಳವಾರ ಬಿಡುಗಡೆ ಮಾಡಲಾಯಿತು.

ರಾಷ್ಟ್ರ ಮತ್ತು ಅಂತರರರಾಷ್ಟ್ರೀಯ ಮಟ್ಟದ ಅಥ್ಲೀಟ್‌ಗಳು ಪಾಲ್ಗೊಳ್ಳುವ ಸ್ಪರ್ಧೆಯಲ್ಲಿ ನೀಡಲಾಗುವ ಟಿ ಶರ್ಟ್‌ಗಳನ್ನು ದೂರ ಮತ್ತು ಮಧ್ಯಮ ದೂರ ಅಂತರದ ಓಟಗಾರ ಜಿನ್ಸನ್ ಜಾನ್ಸನ್‌ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟಕ ಕಂಪನಿ ಆಸಿಕ್‌ನ ವ್ಯವಸ್ಥಾಪಕ ನಿರ್ದೇಶಖ ರಜತ್ ಖುರಾನ್‌ ‘ಆಸಿಕ್ಸ್ ಓಟಕ್ಕೊಂದು ಅನ್ವರ್ಥ ನಾಮವಾಗಿದ್ದು ಸುಧಾರಿತ ತಂತ್ರಜ್ಞಾನಗಳನ್ನು ಒಳಗೊಂಡಿರುವ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸಲು ನಿರಂತರವಾಗಿ ಶ್ರಮಿಸುತ್ತಿದೆ.

ಈ ಬಾರಿ 10ಕೆ ಓಟದಲ್ಲಿ ಪಾಲ್ಗೊಳ್ಳುವ ತಲಾ 500 ಮಹಿಳೆಯರು ಹಾಗೂ ಪುರುಷರಿಗೆ ಫಿನಿಷರ್ಸ್‌ ಟೀ ಶರ್ಟ್ ಪುರಸ್ಕಾರವಾಗಿ ನೀಡಲಾಗುವುದು’ ಎಂದು ತಿಳಿಸಿದರು.

ಪ್ರೋಕಾಂ ಇಂಟರ್‍ನ್ಯಾಷನಲ್‍ನ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಸಿಂಗ್ ‘ಫಿನಿಷರ್ಸ್ ಟಿ ಶರ್ಟ್ ಓಟಗಾರನೊಬ್ಬ ತನ್ನ ಸಾಧನೆಗೆ ಪಡೆಯುವ ಗೌರವವಾಗಿದ್ದು ಅದರಿಂದ ಅವರಿಗೆ ನೈತಿಕ ಧೈರ್ಯ ಸಿಕ್ಕಂತಾಗುತ್ತದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.