ಸೋಮವಾರ, ಏಪ್ರಿಲ್ 19, 2021
25 °C

ನ್ಯೂಜಿಲೆಂಡ್‌ ತಂಡದ ಸ್ವಾಗತ ಸಮಾರಂಭಕ್ಕೆ ತಡೆ

ಪಿಟಿಐ Updated:

ಅಕ್ಷರ ಗಾತ್ರ : | |

ವೆಲ್ಲಿಂಗ್ಟನ್‌: ವಿಶ್ವಕಪ್‌ ಕ್ರಿಕೆಟ್‌ ರನ್ನರ್‌ಅಪ್‌ ತಂಡ ನ್ಯೂಜಿಲೆಂಡ್‌ ತಂಡಕ್ಕೆ ತವರಿನಲ್ಲಿ ನಡೆಯಬೇಕಿದ್ದ ಸ್ವಾಗತ ಸಮಾರಂಭವನ್ನು ತಡೆಯಹಿಡಿಯಲಾಗಿದೆ. ತಂಡದ ಆಟಗಾರರು ಬೇರೆ ಬೇರೆ ಸಮಯದಲ್ಲಿ ಒಂದೊಂದು ಗುಂಪುಗಳಾಗಿ ಆಗಮಿಸಲಿರುವ ಕಾರಣ ಈ ನಿರ್ಧಾರ ತಳೆಯಲಾಗಿದೆ ಎಂದು ನ್ಯೂಜಿಲೆಂಡ್‌ ಕ್ರಿಕೆಟ್‌ ಸಂಸ್ಥೆ ಮಂಗಳವಾರ ತಿಳಿಸಿದೆ.

‘ದೇಶದ ಕ್ರೀಡಾ ಸಚಿವ ಗ್ರ್ಯಾಂಟ್‌ ರಾಬರ್ಟ್‌ಸನ್‌ ಅವರೊಂದಿಗೆ ಚರ್ಚಿಸಿದ್ದೇವೆ. ಪ್ರಧಾನಿ ಜೆಸಿಂದಾ ಆರ್ಡರ್ನ್‌ ಅವರು ತಂಡವನ್ನು ಸ್ವಾಗತಿಸುವ ಉತ್ಸಾಹದಲ್ಲಿದ್ದಾರೆ. ಈ ವೇಳೆ ಕೆಲವು ಆಟಗಾರರು ಬೇರೆ ಬೇರೆ ಸಮಯದಲ್ಲಿ ದೇಶಕ್ಕೆ ಆಗಮಿಸುತ್ತಿದ್ದರೆ, ಕೆಲವರು ಇನ್ನೂ ಬರುತ್ತಲೇ ಇಲ್ಲ. ಮತ್ತೆ ಕೆಲವರು ಬೇರೆ ಟೂರ್ನಿಗಳಲ್ಲಿ ಆಡುವ ಒಪ್ಪಂದದಲ್ಲಿದ್ದಾರೆ. ಹಾಗಾಗಿ ಸದ್ಯ ಅವರನ್ನು ಸ್ವಾಗತಿಸಲು ಸಾಧ್ಯವಾಗುತ್ತಿಲ್ಲ’ ಎಂದು ನ್ಯೂಜಿಲೆಂಡ್‌ ಕ್ರಿಕೆಟ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೇವಿಡ್‌ ವೈಟ್‌ ಅವರು ವೆಬ್‌ಸೈಟ್‌ವೊಂದಕ್ಕೆ ತಿಳಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.