ಬೆಂಗಳೂರು: ಕರ್ನಾಟಕ ಮಹಿಳೆಯರ ತಂಡದವರು ಮಹಾರಾಷ್ಟ್ರದಲ್ಲಿ ನಡೆದ 40ನೇ ರಾಷ್ಟ್ರೀಯ ಸೀನಿಯರ್ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡರು.

ಮಹಾರಾಷ್ಟ್ರ ಅಮೆಚೂರ್ ನೆಟ್‌ಬಾಲ್ ಸಂಸ್ಥೆ ಮತ್ತು ಭಾರತ ನೆಟ್‌ಬಾಲ್ ಫೆಡರೇಷನ್ ಆಶ್ರಯದಲ್ಲಿ ಆಯೋಜಿಸಿದ್ದ ಚಾಂಪಿಯನ್‌ಷಿಪ್‌ನಲ್ಲಿ ಮೂರನೇ ಸ್ಥಾನವನ್ನು ನಿರ್ಣಯಿಸಲು ನಡೆದ ಪಂದ್ಯದಲ್ಲಿ ಕರ್ನಾಟಕ ಮತ್ತು ಹಿಮಾಚಲ ಪ್ರದೇಶ 20–20 ರಲ್ಲಿ ಸಮಬಲ ಸಾಧಿಸಿದವು. ಇದರಿಂದ ಎರಡೂ ತಂಡಗಳಿಗೆ ಜಂಟಿಯಾಗಿ ಮೂರನೇ ಸ್ಥಾನ ಲಭಿಸಿತು.

ಕರ್ನಾಟಕ ತಂಡ ಸೆಮಿಫೈನಲ್‌ನಲ್ಲಿ 33–35 ರಲ್ಲಿ ಹರಿಯಾಣ ಎದುರು ಪರಾಭವಗೊಂಡಿತ್ತು.

ಕರ್ನಾಟಕ ಪುರುಷರ ತಂಡದವರು ಕ್ವಾರ್ಟರ್ ಫೈನಲ್‌ನಲ್ಲಿ 38–41 ರಲ್ಲಿ ಕೇರಳ ತಂಡದ ಎದುರು ಸೋತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.