ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಕಿ: ಸಿಂಗ್ ಅಮೋಘ ಆಟ ಪೋಸ್ಟಲ್‌ ತಂಡಕ್ಕೆ ಜಯ

Published 6 ಜುಲೈ 2024, 13:38 IST
Last Updated 6 ಜುಲೈ 2024, 13:38 IST
ಅಕ್ಷರ ಗಾತ್ರ

ಬೆಂಗಳೂರು: ಹರಪಾಲ್ ಸಿಂಗ್ ಅವರು ಗಳಿಸಿದ ನಾಲ್ಕು ಗೋಲುಗಳ ಬಲದಿಂದ ಪೋಸ್ಟಲ್‌ ತಂಡವು ಇಲ್ಲಿ ನಡೆಯುತ್ತಿರುವ ಕರ್ನಾಟಕ ಹಾಕಿ ಲೀಗ್‌ ಚಾಂಪಿಯನಷಿಪ್‌ 8ನೇ ಆವೃತ್ತಿಯ ಟೂರ್ನಿಯ  ಪಂದ್ಯದಲ್ಲಿ ಜಯಿಸಿತು. 

ಶನಿವಾರ  ನಡೆದ ಪಂದ್ಯದಲ್ಲಿ ಪೋಸ್ಟಲ್ ತಂಡವು  5–2 ಗೋಲುಗಳ ಅಂತರದಿಂದ ಕರ್ನಾಟಕ ರಾಜ್ಯ ಪೊಲೀಸ್‌ ತಂಡವನ್ನು ಸೋಲಿಸಿತು. ಹರಪಾಲ್ ಸಿಂಗ್‌ (16, 29, 53 ಮತ್ತು 55ನೇ ನಿಮಿಷ), ರಮೇಶ್‌ ಎಚ್‌.ಟಿ (46ನೇ ನಿ) ಗೋಲು ದಾಖಲಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ತಂಡ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ ಎಸ್‌ಟಿಸಿ ತಂಡದ ನಡುವಿನ ದಿನದ ಇನ್ನೊಂದು ಪಂದ್ಯ ಯಾವುದೇ ಗೋಲು ದಾಖಲಾಗದೆ ಡ್ರಾಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT