ಕೀಸ್(ಸೌದಿ ಅರೇಬಿಯಾ): ಕರ್ನಾಟಕದ ಅದಿತಿ ಅಶೋಕ್ ಮತ್ತು ತ್ವೇಷಾ ಮಲಿಕ್ ಅವರು ಮೊದಲ ಬಾರಿ ನಡೆಯುತ್ತಿರುವ ಆರಾಮ್ಕೊ ಸೌದಿ ಲೇಡೀಸ್ ಅಂತರರಾಷ್ಟ್ರೀಯ ಗಾಲ್ಫ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಗುರುವಾರ ಇಲ್ಲಿ ಆರಂಭವಾಗಲಿರುವ ಟೂರ್ನಿಯಲ್ಲಿ ಭಾರತದ ದೀಕ್ಷಾ ದಾಗರ್ ಹಾಗೂ ಆಸ್ತಾ ಮದನ್ ಕೂಡ ಆಡಲಿದ್ದಾರೆ.

ದುಬೈನಲ್ಲಿ ಕಳೆದ ವಾರ ನಡೆದ ಟೂರ್ನಿಯಲ್ಲಿ ಅದಿತಿ ಆರನೇ ಸ್ಥಾನಗಳಿಸಿದ್ದರೆ, ತ್ವೇಷಾ 27ನೇ ಸ್ಥಾನ ಗಳಿಸಿದ್ದರು. ಸೌದಿಯಲ್ಲಿ ನಡೆಯುವ ಟೂರ್ನಿಗೆ ಇರುವ ಒಟ್ಟು ಬಹುಮಾನ ಮೊತ್ತ ₹ 8.50 ಕೋಟಿ.

ಮೊರೊಕ್ಕೊದ ಮಹಾ ಹದ್ದಿಯು ಅವರು ಸೌದಿ ಅರೇಬಿಯಾ ಟೂರ್ನಿಯೊಂದರಲ್ಲಿ ಪಾಲ್ಗೊಳ್ಳಲಿರುವ ಮೊದಲ ಅರೇಬಿಕ್ ಮಹಿಳೆಯಾಗಿ ಇಲ್ಲಿ ಇತಿಹಾಸ ಬರೆಯಲಿದ್ದಾರೆ.

ಅದಿತಿ ಅವರು ಟೂರ್ನಿಯ ಆರಂಭದಲ್ಲಿ ಸ್ಪೇನ್‌ನ ನೂರಿಯಾ ಇಟುರಿಯೊಜ್ ಹಾಗೂ ಜರ್ಮನಿಯ ಆಲಿವಿಯಾ ಕೋವನ್ ಅವರ ಜೊತೆ ಪೈಪೋಟಿ ನಡೆಸಲಿದ್ದಾರೆ. ಆಸ್ತಾ ಅವರು ಅಸ್ಟ್ರಿಯದ ಸಾರಾ ಸೋಬರ್ ಹಾಗೂ ಸ್ವೀಡನ್‌ನ ಇಸಾಬೆಲ್ಲಾ ಡೀಲರ್ಟ್ ಅವರು ಇರುವ ತಂಡದಲ್ಲಿ ಆಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.