ಲಂಡನ್: ಭಾರತದ ಲಕ್ಷ್ಯ ಸೇನ್, ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ಸ್ ಪುರುಷರ ಸಿಂಗಲ್ಸ್ ಪ್ರಿ ಕ್ವಾರ್ಟರ್‌ಫೈನಲ್ ತಲುಪಿದರು. ಆದರೆ, ಭಾರತದ ಇನ್ನೊಬ್ಬ ಆಟಗಾರ ಪ್ರಿಯಾಂಶು ರಾಜಾವತ್ ನಿರ್ಗಮಿಸಿದರು.

ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ 22 ವರ್ಷದ ಸೇನ್ 21–14, 21–14 ರಲ್ಲಿ ಡೆನ್ಮಾರ್ಕ್‌ನ ಮ್ಯಾಗ್ನಸ್ ಜೊಹಾನ್ಸೆನ್ ಅವರನ್ನು ನೇರ ಗೇಮ್‌ಗಳಿಂದ ಸೋಲಿಸಿದರು. ಅವರು ಮುಂದಿನ ಸುತ್ತಿನಲ್ಲಿ ನಾಲ್ಕನೇ ಶ್ರೇಯಾಂಕದ ಆಂಡರ್ಸ್ ಆಂಟೊನ್‌ಸೆನ್ (ಡೆನ್ಮಾರ್ಕ್) ಅವರನ್ನು ಎದುರಿಸಲಿದ್ದಾರೆ.

ಇಂಡೊನೇಷ್ಯಾದ ಚಿಕೊ ಆರಾ ದ್ವಿ ವಾರ್ದೊಯೊ ಅವರು ಮೂರು ಗೇಮ್‌ಗಳನ್ನು ಕಂಡ ಮೊದಲ ಸುತ್ತಿನ ಪಂದ್ಯದಲ್ಲಿ ಪ್ರಿಯಾಂಶು ಅವರನ್ನು 21–19, 11–21, 21–9 ರಿಂದ ಹಿಮ್ಮೆಟ್ಟಿಸಿ 16ರ ಸುತ್ತಿಗೆ ಮುನ್ನಡೆದರು.

ವಿಶ್ವ ಕ್ರಮಾಂಕದಲ್ಲಿ 18ನೇ ಸ್ಥಾನದಲ್ಲಿರುವ ಲಕ್ಷ್ಯ ಸೇನ್ ಬಿಟ್ಟರೆ ಉಳಿದ ಆಟಗಾರರು ಮೊದಲ ಸುತ್ತಿನಲ್ಲೇ ನಿರ್ಗಮಿಸಿದಂತಾಗಿದೆ. ಎಚ್.ಎಸ್. ಪ್ರಣಯ್, ಕಿದಂಬಿ ಶ್ರೀಕಾಂತ್ ಅವರು ಮಂಗಳವಾರವೇ ನಿರ್ಗಮಿಸಿದ್ದರು.

ತನಿಶಾ–ಅಶ್ವಿನಿ ಮುನ್ನಡೆ: ಭಾರತದ ತನಿಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ ಅವರು ನೇರ ಗೇಮ್‌ಗಳಿಂದ ಹಾಂಗ್‌ಕಾಂಗ್‌ನ ಯುಂಗ್ ಗಾ ಟಿಂಗ್– ಯುಂಗ್ ಪೈ ಲಾಮ್ ಅವರನ್ನು 21–13, 21–18ರಿಂದ ಸೋಲಿಸಿ ಮಹಿಳಾ ಡಬಲ್ಸ್ ವಿಭಾಗದ ಪ್ರಿ ಕ್ವಾರ್ಟರ್‌ಫೈನಲ್ ತಲುಪಿದರು. ಅವರು ಮುಂದಿನ ಸುತ್ತಿನಲ್ಲಿ ನಾಲ್ಕನೇ ಶ್ರೇಯಾಂಕದ ಚೀನಾದ ಜೋಡಿಯನ್ನು ಎದುರಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.