ನವದೆಹಲಿ: ಅಗ್ರ ಶ್ರೇಯಾಂಕದ ಅರ್ಜುನ್ ಎರಿಗೈಸಿ, ಹರ್ಷ ಭರತ್ಕೋಟಿ ಮತ್ತು ಡಿ ಗುಕೇಶ್ ಇಲ್ಲಿ ನಡೆಯುತ್ತಿರುವ ಡೆಲ್ಲಿ ಇಂಟರ್ನ್ಯಾಷನಲ್ ಓಪನ್ ಗ್ರ್ಯಾಂಡ್ಮಾಸ್ಟರ್ಸ್ ಚೆಸ್ ಟೂರ್ನಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಇನ್ನು ಎರಡು ಸುತ್ತುಗಳ ಸ್ಪರ್ಧೆ ಮಾತ್ರ ಬಾಕಿ ಉಳಿದಿದ್ದು ಟೂರ್ನಿ ರೋಚಕ ಘಟ್ಟ ತಲುಪಿದೆ.
ಭಾನುವಾರ ಎಂಟನೇ ಸುತ್ತಿನಲ್ಲಿ ಎರಿಗೈಸಿ ಮಾಜಿ ರಾಷ್ಟ್ರೀಯ ಚಾಂಪಿಯನ್ ಲಲಿತ್ ಬಾಬು ಅವರನ್ನು 28 ನಡೆಗಳಲ್ಲಿ ಮಣಿಸಿದರು. ಎರಡನೇ ಶ್ರೇಯಾಂಕದ ರಷ್ಯಾ ಆಟಗಾರ ಪವೆಲ್ ಪೊಕ್ರಾಟೊವ್ ಅವರನ್ನು 58 ನಡೆಗಳಲ್ಲಿ ಮಣಿಸಿದರು.
ಯುವ ಗ್ರ್ಯಾಂಡ್ಮಾಸ್ಟರ್ 29 ನಡೆಗಳಲ್ಲಿ ಕಾರ್ತಿಕ್ ವೆಂಕಟರಮಣ ಅವರನ್ನು ಸೋಲಿಸಿದರು.