ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಗೇಮ್ಸ್‌: ಜ್ಯೋಶ್ನಾ ಚಿಣ್ಣಪ್ಪಗೆ ಆಘಾತಕಾರಿ ಸೋಲು

ಫೆವರೀಟ್‌ ಎದುರು ಕೊರಿಯಾ ಆಟಗಾರ್ತಿಗೆ ಜಯ
Published 2 ಅಕ್ಟೋಬರ್ 2023, 13:00 IST
Last Updated 2 ಅಕ್ಟೋಬರ್ 2023, 13:00 IST
ಅಕ್ಷರ ಗಾತ್ರ

ಹಾಂಗ್‌ಝೌ: ಸ್ವ್ಕಾಷ್‌ನಲ್ಲಿ ಪದಕ ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿದ್ದ ಭಾರತದ ಜ್ಯೋಶ್ನಾ ಚಿಣ್ಣಪ್ಪ, ಏಷ್ಯನ್ ಗೇಮ್ಸ್‌ ಮಹಿಳೆಯರ ಸಿಂಗಲ್ಸ್‌ನಿಂದ ಹೊರಬಿದ್ದರು. ಸೋಮವಾರ ನಡೆದ ಪ್ರಿಕ್ವಾರ್ಟರ್‌ ಫೈನಲ್‌ನಲ್ಲಿ ಅವರು ತುಂಬಾ ಕೆಳಕ್ರಮಾಂಕದ ದಕ್ಷಿಣ ಕೊರಿಯಾದ ಆಟಗಾರ್ತಿ ಹಿಯೊ ಮಿಂಗ್‌ಇಯೊಂಗ್ ಎದರು 1–3 ರಿಂದ ಆಘಾತಕಾರಿ ಸೋಲು ಅನುಭವಿಸಿದರು.

ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಜ್ಯೋಶ್ನಾ 4–11, 12–10, 9–11, 8–11 ರಿಂದ ಹಿಯೊ ಎದುರು ಸೋಲನುಭವಿಸಿದರು. ಕೊರಿಯಾ ಆಟಗಾರ್ತಿ ವಿಶ್ವ ಕ್ರಮಾಂಕದಲ್ಲಿ 158ನೇ ಸ್ಥಾನದಲ್ಲಿದ್ದಾರೆ. 37 ನಿಮಿಷಗಳಲ್ಲಿ ಗೆದ್ದ ಅವರು ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದರು.

2018ರ ಜಕಾರ್ತಾ ಕ್ರೀಡೆಗಳ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗಳಿಸಿದ್ದ 37 ವರ್ಷದ ಚೆನ್ನೈ ಆಟಗಾರ್ತಿ ಇಲ್ಲೂ ಪದಕಕ್ಕೆ ಫೆವರೀಟ್ ಆಗಿದ್ದರು. ಅವರು ಈ ಹಿಂದೆ ಎರಡು ಬೆಳ್ಳಿ ಮತ್ತು ಕಳೆದ ವಾರ ಟೀಮ್‌ ವಿಭಾಗದಲ್ಲಿ ಗೆದ್ದ ಕಂಚು ಸೇರಿ ಎರಡು ಕಂಚಿನ ಪದಕಗಳನ್ನು ಪಡೆದಿದ್ದಾರೆ. ಹೀಗಾಗಿ ಈ ಸೋಲು ಅವರ ಮಟ್ಟಿಗೆ ದೊಡ್ಡ ಹಿನ್ನಡೆ ಎನಿಸಿತು.

ಗಾಯಾಳಾದ ಪರಿಣಾಮ ಮತ್ತು ಟೂರ್ನಿಗಳಲ್ಲಿ ಆಡದ ಕಾರಣ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ 70ನೇ ಸ್ಥಾನಕ್ಕೆ ಇಳಿದಿದ್ದರು.

ಕಣದಲ್ಲಿರುವ ಭಾರತದ ಇನ್ನೊಬ್ಬ ಆಟಗಾರ್ತಿ ತನ್ವಿ ಖನ್ನಾ ಸುಲಭ ಗೆಲುವಿನೊಡನೆ ಎಂಟರ ಘಟ್ಟ ತಲುಪಿದರು. ಅವರು 11–1, 11–3, 11–2 ರಿಂದ ಥಾಯ್ಲೆಂಡ್‌ನ ಅರಿಚಯಾ ಚುಜಿತ್ ಅವರನ್ನು ಮಣಿಸಿದರು.

ಮಿಕ್ಸೆಡ್ ಡಬಲ್ಸ್‌ನಲ್ಲಿ ಅನಾಹತ್ ಸಿಂಗ್ ಮತ್ತು ಅಭಯ್ ಸಿಂಗ್ ಅವರೂ ಜಯಗಳಿಸಿದರು. ಈ ಜೋಡಿ ‘ಡಿ’ ಗುಂಪಿನ ಪಂದ್ಯದಲ್ಲಿ 2–0 ಯಿಂದ (11–5, 11–6) ಥಾಯ್ಲೆಂಡ್‌ನ ಜೋಡಿ ಮೇಲೆ ಜಯಗಳಿಸಿ ಎಂಟರ ಘಟ್ಟ ಪ್ರವೇಶಿಸುವ ಸಾಧ್ಯತೆಯನ್ನು ಉಜ್ವಲಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT