ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: 21ರಿಂದ ಏಷ್ಯನ್‌ ಟೇಕ್ವಾಂಡೊ ಚಾಂಪಿಯನ್‌ಷಿಪ್‌

Published : 8 ಆಗಸ್ಟ್ 2024, 23:41 IST
Last Updated : 8 ಆಗಸ್ಟ್ 2024, 23:41 IST
ಫಾಲೋ ಮಾಡಿ
Comments

ಬೆಂಗಳೂರು: 10ನೇ ಏಷ್ಯನ್‌ ಐಟಿಎಫ್‌ ಟೇಕ್ವಾಂಡೊ ಚಾಂಪಿಯನ್‌ಷಿಪ್‌ ಇದೇ 21ರಿಂದ 25ರ ವರೆಗೆ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತದ ಟೇಕ್ವಾಂಡೊ ಇತಿಹಾಸದಲ್ಲೇ ಮೊದಲ ಬಾರಿಗೆ ಒಂಬತ್ತು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.

ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ, ಐಟಿಎಫ್‌ ಅಧ್ಯಕ್ಷ ರಿ ಯಾಂಗ್‌ ಸನ್‌, ಕೆಟಿಎಫ್‌ ಅಧ್ಯಕ್ಷ ಕಿಮ್‌ ಮಿಯಾಂಗ್‌ ಗನ್‌ ಉಪಸ್ಥಿತರಿರಲಿದ್ದಾರೆ.

ಇಂಡಿಜುಯಲ್‌ ಸ್ಪಾರಿಂಗ್‌, ಇಂಡಿಜುಯಲ್‌ ಪ್ಯಾಟರ್ನ್‌, ಇಂಡಿಜುಯಲ್‌ ಪವರ್‌, ಇಂಡಿಜುಯಲ್‌ ಸ್ಪೇಷಲ್‌ ಟೆಕ್ನಿಕ್‌, ಟೀಮ್‌ ಸ್ಪಾರಿಂಗ್‌, ಟೀಮ್‌ ಪ್ಯಾಟರ್ನ್‌, ಟೀಮ್‌ ಪವರ್‌, ಟೀಮ್‌ ಸ್ಪೇಷಲ್‌ ಟೆಕ್ನಿಕ್‌, ಸೆಲ್ಫ್‌ ಡಿಪೆನ್ಸ್‌ ರುಟೀನ್‌ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಏಷ್ಯಾ ಖಂಡದ 30 ದೇಶಗಳ 700ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT