ಸಿಡ್ನಿ: ಆಸ್ಟ್ರೇಲಿಯನ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಲಕ್ಷ್ಯ ಸೇನ್ ಪ್ರಶಸ್ತಿ ಮುಡಿಗೇರಿಕೊಂಡಿದ್ದಾರೆ.

24 ವರ್ಷದ ಲಕ್ಷ್ಯ, ಇಂದು (ಭಾನುವಾರ) ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ಜಪಾನ್ನ ಯುಶಿ ತನಾಕ ವಿರುದ್ಧ 21-15 21-11ರ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಲಕ್ಷ್ಯ ಸೇನ್, ಪ್ರಸಕ್ತ ಋತುವಿನಲ್ಲಿ ಮೊದಲ ಪ್ರಶಸ್ತಿ ಬಗಲಿಗೇರಿಸಿಕೊಂಡಿದ್ದಾರೆ.

ಪಂದ್ಯದುದ್ಧಕ್ಕೂ ದಿಟ್ಟ ಹೋರಾಟ ನೀಡಿದ ಸೇನ್, 38 ನಿಮಿಷಗಳ ಅಂತರದಲ್ಲಿ ಪಂದ್ಯ ವಶಪಡಿಸಿಕೊಂಡಿದ್ದಾರೆ.

2021ರ ವಿಶ್ವ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕ ಗೆದ್ದಿದ್ದ ಲಕ್ಷ್ಯ, 2024ರ ಸೈಯದ್ ಮೋದಿ ಇಂಟರ್ನ್ಯಾಷನಲ್ ಸೂಪರ್ 300 ಟೂರ್ನಿಯಲ್ಲಿ ಕೊನೆಯದಾಗಿ ಪ್ರಶಸ್ತಿ ಗೆದ್ದಿದ್ದರು.
.IND vs SA 2nd Test: ದ.ಆಫ್ರಿಕಾ ಬ್ಯಾಟರ್ಗಳ ದಿಟ್ಟ ಆಟ; ಬೌಲರ್ಗಳ ಪರದಾಟ .IND vs SA |ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿ; ಕನ್ನಡಿಗ ರಾಹುಲ್ಗೆ ನಾಯಕ ಪಟ್ಟ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.