ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜೂನಿಯರ್‌ ಬ್ಯಾಡ್ಮಿಂಟನ್‌: ಕ್ವಾರ್ಟರ್‌ಗೆ ಭಾರತ

Published 29 ಜೂನ್ 2024, 15:52 IST
Last Updated 29 ಜೂನ್ 2024, 15:52 IST
ಅಕ್ಷರ ಗಾತ್ರ

ಯೋಗ್ಯಕರ್ತ, ಇಂಡೊನೇಷ್ಯಾ: ಭಾರತ ತಂಡವು ಇಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್‌ ಏಷ್ಯಾ ಜೂನಿಯರ್‌ ಮಿಶ್ರ ಟೀಂ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು.

‘ಸಿ’ ಗುಂಪಿನಲ್ಲಿರುವ ಭಾರತ ತಂಡವು ಶನಿವಾರ ನಡೆದ ಪಂದ್ಯದಲ್ಲಿ ಫಿಲಿಪೀನ್ಸ್ ತಂಡವನ್ನು 3–2ರಿಂದ ಮಣಿಸಿತು. ಮೊದಲ ಪಂದ್ಯದಲ್ಲಿ ವಿಯೆಟ್ನಾಂ ವಿರುದ್ಧ 5–0ಯಿಂದ ಸುಲಭ ಗೆಲುವು ಸಾಧಿಸಿತ್ತು. ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಭಾರತವು ಭಾನುವಾರ ಆತಿಥೇಯ ಇಂಡೊನೇಷ್ಯಾ ತಂಡವನ್ನು ಎದುರಿಸಲಿದೆ.

ಬಾಲಕಿಯರ ಸಿಂಗಲ್ಸ್‌ನಲ್ಲಿ ತನ್ವಿ ಶರ್ಮಾ, ಡಬಲ್ಸ್‌ನಲ್ಲಿ ವೆನ್ನಾಲ ಕೆ. ಮತ್ತು ಶ್ರಾವಣಿ ಮತ್ತು ಬಾಲಕರ ಡಬಲ್ಸ್‌ನಲ್ಲಿ ಅರ್ಶ್ ಮೊಹಮ್ಮದ್ ಮತ್ತು ಶಂಕರ್ ಸರವತ್ ಗೆಲುವು ಸಾಧಿಸಿದರೆ, ಬಾಲಕರ ಡಬಲ್ಸ್‌ನಲ್ಲಿ ಜಮಾಲ್ ರಹಮತ್ ಪಾಂಡಿ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಭಾರ್ಗವ್‌ ರಾಮ್‌ ಮತ್ತು ವೆನ್ನಾಲ ಮುಗ್ಗರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT