ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್ ಲೀಗ್: ಬೆಂಗಳೂರು– ಮುಂಬೈ ಮಧ್ಯೆ ಮೊದಲ ಪಂದ್ಯ

27ರಿಂದ ಗ್ರ್ಯಾನ್‌ಪ್ರೀ ಬ್ಯಾಡ್ಮಿಂಟನ್ ಲೀಗ್ ಆರಂಭ
Published 23 ಆಗಸ್ಟ್ 2023, 21:24 IST
Last Updated 23 ಆಗಸ್ಟ್ 2023, 21:24 IST
ಅಕ್ಷರ ಗಾತ್ರ

ಬೆಂಗಳೂರು: ಆತಿಥೇಯ ಬೆಂಗಳೂರು ಟೈಗರ್ಸ್‌ ತಂಡವು ಭಾನುವಾರ (ಆ.27) ಆರಂಭವಾಗಲಿರುವ ಗ್ರ್ಯಾನ್‌ಪ್ರೀ ಬ್ಯಾಡ್ಮಿಂಟನ್ ಲೀಗ್ (ಜಿಪಿಬಿಎಲ್‌) ಟೂರ್ನಿಯ ಎರಡನೇ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಮುಂಬೈ ವೂಲ್ವ್ಸ್‌ ತಂಡವನ್ನು ಎದುರಿಸಲಿದೆ.

ಮೊದಲ ದಿನ ಮತ್ತೊಂದು ಪಂದ್ಯದಲ್ಲಿ ಚೆನ್ನೈ ಸೂಪರ್‌ಸ್ಟಾರ್ಜ್ ತಂಡವು ನಾರ್ತ್‌ಈಸ್ಟ್‌ ರೈನೋಸ್‌ ತಂಡದ ವಿರುದ್ಧ ಸೆಣಸಾಡಲಿದೆ.

ಹೈದರಾಬಾದ್ ಹೌಂಡ್ಸ್, ಪುಣೆ ಪ್ಯಾಂಥರ್ಸ್, ಗುಜರಾತ್ ಲಯನ್ಸ್, ಕೇರಳ ಟಸ್ಕರ್ಸ್ ಕಣದಲ್ಲಿರುವ ಇತರ ತಂಡಗಳು. 13 ದಿನಗಳ ಕಾಲ ನಡೆಯುವ ಲೀಗ್‌ನಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಆಟಗಾರರು ಸ್ಪರ್ಧೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಲೀಗ್‌ ಹಂತದಲ್ಲಿ ಎಂಟು ತಂಡಗಳು ಒಂದೇ ಗುಂಪಿನಲ್ಲಿ ಇರಲಿದ್ದು, ಪ್ರತಿ ತಂಡಗಳು ಐದು ಪಂದ್ಯಗಳನ್ನು ಆಡಲಿವೆ. ಪ್ರತಿ ಪಂದ್ಯದಲ್ಲೂ ಆಟಗಾರರು ಮೂರು ಸೆಟ್‌ಗಳನ್ನು ಆಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಲೀಗ್‌ ಹಂತದ ಸ್ಪರ್ಧೆಗಳಲ್ಲಿ ಟಾಪ್‌ ನಾಲ್ಕು ಸ್ಥಾನ ಗಳಿಸುವ ತಂಡಗಳು ಸೆಮಿಫೈನಲ್‌ ಪ್ರವೇಶ ಪಡೆಯಲಿವೆ. ಸೆ.6ರಂದು ಮೊದಲ ಹಾಗೂ ನಾಲ್ಕನೇ ಸ್ಥಾನದಲ್ಲಿರುವ ತಂಡಗಳು ಮೊದಲ ಸೆಮಿಫೈನಲ್‌ನಲ್ಲಿ, ಎರಡನೇ ಮತ್ತು ಮೂರನೇ ಸ್ಥಾನದಲ್ಲಿರುವ ತಂಡಗಳು ಮತ್ತೊಂದು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಸೆ.8ರಂದು ಪ್ರಶಸ್ತಿ ಸುತ್ತಿನ ಪಂದ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT