ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಜಿಟೊ–ಫಿಲಾಸಫಿ ಪೈಪೋಟಿ

ಬೆಟ್‌ವೇ ಬೆಂಗಳೂರು ಬೇಸಿಗೆ ಡರ್ಬಿ ರೇಸ್‌ ಇಂದು: ಗರಿಗೆದರಿದ ಕುತೂಹಲ
Last Updated 16 ಜುಲೈ 2022, 18:41 IST
ಅಕ್ಷರ ಗಾತ್ರ

ಬೆಂಗಳೂರು: ರೇಸ್‌ ಪ್ರಿಯರ ಕುತೂಹಲಕ್ಕೆ ಕಾರಣವಾಗಿರುವ ಬೆಂಗಳೂರು ಬೇಸಿಗೆ ಡರ್ಬಿ ಭಾನುವಾರ ನಡೆಯಲಿದೆ.

‘ಬೆಟ್‌ ವೇ’ ಇದೇ ಮೊದಲ ಬಾರಿಗೆ ಬೆಂಗಳೂರು ಬೇಸಿಗೆ ರೇಸ್‌ಗಳ ಪ್ರಾಯೋಜಕತ್ವ ವಹಿಸಿಕೊಂಡಿದೆ. ವಿದೇಶಿ ಸಂಸ್ಥೆಯೊಂದು ಭಾರತದಲ್ಲಿ ರೇಸ್‌ಗೆ ಪ್ರಾಯೋಜಕತ್ವ ವಹಿಸಿಕೊಂಡಿರುವುದು ಇದೇ ಮೊದಲು. ಪ್ರತಿಷ್ಠಿತ ಡರ್ಬಿ ರೇಸ್‌ಗೆ ‘ಬೆಟ್‌ವೇ ಬೆಂಗಳೂರು ಬೇಸಿಗೆ ಡರ್ಬಿ’ ಎಂದು ನಾಮಕರಣ ಮಾಡಲಾಗಿದೆ.

ಡರ್ಬಿ ರೇಸ್‌ ಕಣದಲ್ಲಿ 10 ಗಂಡು ಮತ್ತು 3 ಹೆಣ್ಣು ಕುದುರೆಗಳು ಸ್ಪರ್ಧೆಯಲ್ಲಿವೆ. ಅವುಗಳಲ್ಲಿ ಕ್ರಮವಾಗಿ 1,600 ಮೀಟರ್ಸ್‌ ದೂರದ ಕೋಲ್ಟ್‌ ಚಾಂಪಿಯನ್‌ಷಿಪ್‌ ಸ್ಟೇಕ್ಸ್‌ ಮತ್ತು ಫಿಲ್ಲೀಸ್‌ ಚಾಂಪಿಯನ್‌ಷಿಪ್‌ ಸ್ಟೇಕ್ಸ್‌ ಗಳನ್ನು ಗೆದ್ದಿರುವ ಮೊಜಿಟೊ ಹಾಗೂ ಫಿಲಾಸಫಿ ನಡುವೆ ತುರುಸಿನ ಸ್ಪರ್ಧೆ ನಿರೀಕ್ಷಿಸಲಾಗಿದೆ.

ಇವೆರಡೂ ಕುದುರೆಗಳು ದೂರದ ರೇಸ್‌ನಲ್ಲಿ ಒಂದೇ ರೀತಿಯ ‘ಸ್ಟೇಯಿಂಗ್‌ ಸಾಮರ್ಥ್ಯ’ ವನ್ನು ಪ್ರದರ್ಶಿಸಿವೆ. ಆದರೂ ಎಂ.ಕೆ.ಜಾಧವ್‌ ತರಬೇತಿಯಲ್ಲಿರುವ ಮೊಜಿಟೊ ತುಸು ಮೇಲುಗೈ ಹೊಂದಿದೆ.

ಮೊಜಿಟೊ ಗೆದ್ದ ‘ಕೋಲ್ಟ್‌ ಚಾಂಪಿಯನ್‌ಷಿಪ್‌ ಸ್ಟೇಕ್ಸ್‌ ರೇಸ್‌’ ನ ಕೊನೆ ಗಳಿಗೆಯಲ್ಲಿ ವೇಗವಾಗಿ ಓಡಿ ಬಂದು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದಿರುವ ಆರ್ಥರ್‌ ಮತ್ತು ಲಿಯೊನಾರ್ಡೊ ಕುದುರೆಗಳನ್ನು ಕೂಡಾ 2,000 ಮೀಟರ್ಸ್‌ ದೂರದ ಡರ್ಬಿ ರೇಸ್‌ನಲ್ಲಿ ತಳ್ಳಿಹಾಕುವಂತಿಲ್ಲ.

ಸಕ್ಸಸ್‌ ಕುದುರೆ ಈಗಾಗಲೇ 2000 ಮೀಟರ್ಸ್‌ ದೂರದ ರೇಸ್‌ನಲ್ಲಿ ನಿರಾಯಾಸ ಗೆಲುವು ಸಾಧಿಸಿದ್ದು, ಈ ಡರ್ಬಿಯಲ್ಲೂ ಪ್ರಮುಖ ಸ್ಪರ್ಧಿ ಎನಿಸಿಕೊಂಡಿದೆ. ಮುಕ್ತವಾಗಿ ಕಂಡು ಬರುತ್ತಿರುವ ಈ ಬಾರಿಯ ಡರ್ಬಿಯಲ್ಲಿ ಮೊಜಿಟೊ ತುಸು ಮೇಲುಗೈ ಹೊಂದಿದೆಯಾದರೂ, ರೋಚಕ ಫಲಿತಾಂಶವನ್ನು ನಿರೀಕ್ಷಿಸಬಹುದು.

ದಿನದ 6ನೇ ರೇಸ್‌ ಡರ್ಬಿ ಆಗಿದ್ದು, ಸಂಜೆ 4.15ಕ್ಕೆ ಪ್ರಾರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT