ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ಯಾರಾಲಿಂಪಿಕ್ಸ್‌ | ಶಾಟ್‌ಪಟ್‌: ಭಾಗ್ಯಶ್ರೀ ಜಾಧವ್‌ಗೆ ನಿರಾಸೆ

Published 3 ಸೆಪ್ಟೆಂಬರ್ 2024, 15:55 IST
Last Updated 3 ಸೆಪ್ಟೆಂಬರ್ 2024, 15:55 IST
ಅಕ್ಷರ ಗಾತ್ರ

‍ಪ್ಯಾರಿಸ್‌: ಭಾರತದ ಭಾಗ್ಯಶ್ರೀ ಜಾಧವ್ ಅವರು ಮಂಗಳವಾರ ಇಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನ ಮಹಿಳೆಯರ ಶಾಟ್‌ಪಟ್‌ನಲ್ಲಿ (ಎಫ್‌34) ಐದನೇ ಸ್ಥಾನ ಪಡೆದರು.

ಪ್ಯಾರಾಲಿಂಪಿಕ್ಸ್‌ನಲ್ಲಿ ಎರಡನೇ ಬಾರಿ ಭಾಗವಹಿಸುತ್ತಿರುವ ಭಾಗ್ಯಶ್ರೀ ಷಾಟ್‌ಪಟ್‌ಅನ್ನು 7.28 ಮೀ ದೂರ ಎಸೆದರು. ಆದರೆ ಅದು ಪದಕ ಗೆಲ್ಲಲು ಸಾಲಲಿಲ್ಲ.

ಚೀನಾದ ಲಿಜುವಾನ್ ಝೌ 9.14ಮೀ. ದೂರ ಎಸೆಯುವುದರೊಂದಿಗೆ ಚಿನ್ನ ಗೆದ್ದರೆ, ಪೋಲೆಂಡ್‌ನ ಲೂಸಿನಾ ಕಾರ್ನೋಬಿಸ್ 8.33 ಮೀ. ಪ್ರಯತ್ನದಿಂದ ಬೆಳ್ಳಿ ತಮ್ಮದಾಗಿಸಿಕೊಂಡರು.

39 ವರ್ಷದ ಭಾಗ್ಯಶ್ರೀ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯವರು. 2006ರಲ್ಲಿ ಅಪಘಾತದಿಂದಾಗಿ ತನ್ನ ಕಾಲುಗಳ ಸ್ವಾಧೀನ ಕಳೆದುಕೊಂಡ ನಂತರ ಖಿನ್ನತೆಗೆ ಜಾರಿದ್ದರು. ಸ್ನೇಹಿತರು ಮತ್ತು ಕುಟುಂಬದ ಪ್ರೋತ್ಸಾಹದಿಂದ ಪ್ಯಾರಾ ಕ್ರೀಡೆಯಲ್ಲಿ ಕಾಣಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT