ನವದೆಹಲಿ: ನಾಲ್ಕು ಬಾರಿಯ ಏಷ್ಯನ್ ಪದಕ ವಿಜೇತ ಶಿವ್ ಥಾಪಾ, ಕಜಕಸ್ತಾನದ ಅಸ್ತನಾದಲ್ಲಿ ನಡೆಯುತ್ತಿರುವ ಪ್ರೆಸಿಡೆಂಟ್ಸ್ ಕಪ್ ಬಾಕ್ಸಿಂಗ್ ಟೂರ್ನಿಯಲ್ಲಿ ಶುಕ್ರವಾರ ಹೊಸ ತೂಕ ವಿಭಾಗದಲ್ಲಿ ಉತ್ತಮ ಆರಂಭ ಮಾಡಿ ಫೈನಲ್ ತಲುಪಿದರು. ಮೊದಲ ಬಾರಿ ಅವರು 63 ಕೆ.ಜಿ. ವಿಭಾಗದಲ್ಲಿ ಕಣಕ್ಕಿಳಿದಿದ್ದಾರೆ.

ಥಾಪಾ, ಸೆಮಿಫೈನಲ್‌ನಲ್ಲಿ ಆರಂಭದ ಹಿನ್ನಡೆಯಿಂದ ಚೇತರಿಸಿಕೊಂಡು ಕಿರ್ಗಿಸ್ತಾನದ ಅರ್ಗನ್ ಕದಿರಿಬೆಕುಲು ಅವರನ್ನು 4–1 ರಿಂದ ಸೋಲಿಸಿದರು.

ಮಹಿಳೆಯರ 60 ಕೆ.ಜಿ. ವಿಭಾಗದಲ್ಲಿ ಪರ್ವೀನ್, ಸ್ಥಳೀಯ ಆಟಗಾರ್ತಿ ಕರಿನಾ ಇಬ್ರಾಗಿಮೊವಾ ಮೇಲೆ ಜಯಗಳಿಸಿ ಫೈನಲ್ ತಲುಪಿದರು. ಭಾರತದ ದುರ್ಯೋಧನ ಸಿಂಗ್ ನೇಗಿ (69 ಕೆ.ಜಿ) ಮತ್ತು ಸ್ವೀಟಿ ಬೂರಾ (81 ಕೆ.ಜಿ) ಸೆಮಿಫೈನಲ್‌ನಲ್ಲಿ ಸೋತು ಕಂಚಿನ ಪದಕಕ್ಕೆ ಸಮಾಧಾನಪಟ್ಟುಕೊಳ್ಳಬೇಕಾಯಿತು. ಅಮಿತ್ ಪಂಗಲ್ (52 ಕೆ.ಜಿ. ವಿಭಾಗ) ಎಂಟರ ಘಟ್ಟದಲ್ಲೇ ನಿರ್ಗಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.