ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್‌: ಸರಿತಾ ದೇವಿಗೆ ಕಂಚು

Last Updated 15 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಅನುಭವಿ ಬಾಕ್ಸರ್‌ ಎಲ್‌.ಸರಿತಾ ದೇವಿ ಅವರು ಪೋಲೆಂಡ್‌ನಲ್ಲಿ ನಡೆಯುತ್ತಿರುವ 13ನೇ ಸಿಲೆಸಿಯನ್‌ ಓಪನ್‌ ಮಹಿಳಾ ಬಾಕ್ಸಿಂಗ್‌ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

ಶುಕ್ರವಾರ ನಡೆದ ಸೀನಿಯರ್‌ ಮಹಿಳೆಯರ 60 ಕೆ.ಜಿ ವಿಭಾಗದ ಸೆಮಿಫೈನಲ್‌ನಲ್ಲಿ ಸರಿತಾ 0–5ರಿಂದ ಕಜಕಸ್ತಾನದ ಕರಿನಾ ಇಬ್ರಾಗಿಮೊವಾ ವಿರುದ್ಧ ಸೋತರು.

69 ಕೆ.ಜಿ. ವಿಭಾಗದಲ್ಲಿ ಕಣದಲ್ಲಿದ್ದ ಲ‌ವ್ಲಿನಾ ಬೊರ್ಗೊಹೇನ್‌ ಮತ್ತು 81 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಪೂಜಾ ರಾಣಿ ಅವರೂ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಸೆಮಿಫೈನಲ್‌ನಲ್ಲಿ ಲವ್ಲಿನಾ 1–4ರಲ್ಲಿ ಪೋಲೆಂಡ್‌ನ ಕ್ಯಾರೋಲಿನ್‌ ಕೊಸಜೆವ್‌ಸ್ಕಾ ಎದುರೂ, ಪೂಜಾ 2–3ರಲ್ಲಿ ಅಗತಾ ಕಜಮರ್ಸ್ಕಾ ವಿರುದ್ಧವೂ ಪರಾಭವಗೊಂಡರು.

ಜೂನಿಯರ್‌ ವಿಭಾಗದಲ್ಲಿ ಭಾರತದ ಸ್ಪರ್ಧಿಗಳು ಒಟ್ಟು 13 ಪದಕಗಳನ್ನು ಗೆದ್ದು ಗಮನ ಸೆಳೆದಿದ್ದರು.

ಸೀನಿಯರ್‌ ವಿಭಾಗದಲ್ಲಿ ಒಲಿಂಪಿಯನ್‌ ಬಾಕ್ಸರ್‌ ಎಂ.ಸಿ.ಮೇರಿ ಕೋಮ್‌ (48 ಕೆ.ಜಿ) ಮತ್ತು ಮನೀಷಾ (54 ಕೆ.ಜಿ), ಯೂತ್‌ ವಿಭಾಗದಲ್ಲಿ ಜ್ಯೋತಿ ಗುಲಿಯಾ (51 ಕೆ.ಜಿ) ಅವರು ಫೈನಲ್‌ ಪ್ರವೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT