ಪ್ಯಾರಿಸ್: ಭಾರತದ ಒಲಿಂಪಿಯನ್ ಪಿ.ವಿ. ಸಿಂಧು ಅವರು ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಮಹಿಳೆಯರ ಸಿಂಗಲ್ಸ್ ಮೊದಲ ಪಂದ್ಯದಲ್ಲಿ ಜಯ ಸಾಧಿಸಿದರು.

ಮಂಗಳವಾರ ನಡೆದ ಪಂದ್ಯದಲ್ಲಿ ವಿಶ್ವ ರ್ಯಾಂಕಿಂಗ್ನಲ್ಲಿ 15ನೇ ಸ್ಥಾನದಲ್ಲಿರುವ ಅನುಭವಿ ಸಿಂಧು ಅವರು 23–21, 21–6ರಿಂದ ಬಲ್ಗೇರಿಯಾದ 69ನೇ ರ್ಯಾಂಕ್ ಆಟಗಾರ್ತಿ ಕಲೊಯಾನಾ ನಲಬಂತೋವಾ ವಿರುದ್ಧ ಜಯಿಸಿದರು.

ಪಂದ್ಯದ ಮೊದಲ ಗೇಮ್ನಲ್ಲಿ ಭಾರತದ 30 ವರ್ಷ ವಯಸ್ಸಿನ ಸಿಂಧು ಪ್ರಯಾಸದಾಯಕ ಜಯ ಸಾಧಿಸಿದರು. ಅವರು ಆರಂಭದಲ್ಲಿ 0–4ರಿಂದ ಹಿನ್ನಡೆಯಲ್ಲಿದ್ದರು. ಅನಿಯಂತ್ರಿತ ತಪ್ಪುಗಳಿಂದಾಗಿ ಸಿಂಧು ತುಸು ದುರ್ಬಲವಾಗಿ ಕಂಡಿದ್ದರು. ಇದರ ಲಾಭ ಪಡೆದ ನಲಬಂತೊವಾ 11–7ರ ಮುನ್ನಡೆ ಪಡೆದಿದ್ದರು. ಅಲ್ಪವಿರಾಮದ ನಂತರದ ಸಿಂಧು ಲಯಕ್ಕೆ ಮರಳಿದರು.

ಕ್ರಾಸ್ ಕೋರ್ಟ್ ವಿನ್ನರ್ಗಳನ್ನು ಪ್ರದರ್ಶಿಸಿದರು. ಶರವೇಗ ಸ್ಮ್ಯಾಷ್ಗಳ ಮೂಲಕ ಬಲ್ಗೇರಿಯಾದ ಆಟಗಾರ್ತಿಯ ಲಯ ತಪ್ಪಿಸಿದರು. ಇದರಿಂದಾಗಿ ಕೆಲವೇ ನಿಮಿಷಗಳಲ್ಲಿ 12–12ರ ಸಮಬಲಕ್ಕೆ ಬಂದು ನಿಂತರು. ನಲಬಂತೋವಾ ಎಸಗಿದ ಎರಡು ತಪ್ಪುಗಳಿಂದಾಗಿ ಸಿಂಧು 14–12ರ ಮಹತ್ವದ ಮುನ್ನಡೆ ಸಾಧಿಸಿದರು. ನಂತರದ ಆಟವು ರೋಚಕವಾಗಿತ್ತು. ಒಂದು ಹಂತದಲ್ಲಿ 19–20ರಿಂದ ಮುಂದಿದ್ದ ನಲಬಂತೋವಾ ಗೇಮ್ ಪಾಯಿಂಟ್ ಗಳಿಸುವಲ್ಲಿ ವಿಫಲರಾದರು. ಅವರು ಹೊಡೆದ ಶಟಲ್, ನೆಟ್ಗೆ ಅಪ್ಪಳಿಸಿತ್ತು. ಇದರಿಂದಾಗಿ 20–20ರ ಸಮಬಲಕ್ಕೆ ಗೇಮ್ ಬಂದಿತು. ಅದರ ನಂತರವೂ ಮತ್ತೊಂದು ಪಾಯಿಂಟ್ ಗಳಿಸಿದ ಬಲ್ಗೇರಿಯನ್ ಆಟಗಾರ್ತಿ ಮತ್ತೊಮ್ಮೆ ಎಡವಿದರು. ಆದರೆ ಸಿಂಧು ಈ ಅವಕಾಶ ಬಿಡಲಿಲ್ಲ. ಗೇಮ್ ತಮ್ಮದಾಗಿಸಿಕೊಂಡರು.

ಎರಡನೇ ಗೇಮ್ನಲ್ಲಿ ಸಿಂಧು ತಮ್ಮ ಎದುರಾಳಿಗೆ ಯಾವುದೇ ಅವಕಾಶ ನೀಡಲಿಲ್ಲ. ಆರಂಭದಲ್ಲಿಯೇ 5–1ರ ಮುನ್ನಡೆ ಸಾಧಿಸಿದರು. ಆದರೂ ತಿರುಗೇಟು ನೀಡುವ ಪ್ರಯತ್ನ ಮಾಡಿದ ನಲಬಂತೋವಾ 5–6ರ ಸ್ಕೋರ್ಗೆ ಬಂದರು. ಆದರೆ ಈ ಹಂತದಿಂದ ಚುರುಕಾಗಿ ಆಡಿದ ಸಿಂಧು 17–5ರ ಮುನ್ನಡೆ ಸಾಧಿಸಿದರು. ನಂತರದ ಹಂತದಲ್ಲಿ ಎದುರಾಳಿಗೆ ಒಂದು ಅಂಕ ಮಾತ್ರ ಕೊಟ್ಟರು. ತಾವು ಗೆಲುವಿನತ್ತ ಸಾಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.