ಶಿವಮೊಗ್ಗ: ಬೆಂಗಳೂರಿನ ವಿವಾನ್ ಸಚದೇವ್ ಮತ್ತು ಆರುಷಿ ಸೆವೆರಿನ್ ಹೆಲೆನ್ ಡಿಸಿಲ್ವ ಅವರು ರಾಜ್ಯ 19 ವರ್ಷದೊಳಗಿನವರ ಫಿಡೆ ರೇಟೆಡ್ ಚೆಸ್ ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ಓಪನ್ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ವಿವಾನ್ 9 ಸುತ್ತುಗಳಲ್ಲಿ ಒಂದೂ ಪಂದ್ಯ ಸೋಲದೇ 8.5 ಪಾಯಿಂಟ್ಸ್ ಕಲೆಹಾಕಿದರು. ಟ್ರೋಫಿ ಜೊತೆ ₹7000 ನಗದು ಬಹುಮಾನ ಪಡೆದರು.

ಚಾಣಕ್ಯ ಚೆಸ್ ಸ್ಕೂಲ್ ಮತ್ತು ಜೆಸಿಐ ಶಿವಮೊಗ್ಗ ಚಿರಂತನ ಜಂಟಿ ಆಶ್ರಯದಲ್ಲಿ ಈ ಮೂರು ದಿನಗಳ ಚಾಂಪಿಯನ್ಷಿಪ್ ಭಾನುವಾರ ಮುಕ್ತಾಯಗೊಂಡಿತು.

ಬೆಂಗಳೂರು ನಗರದ ಕೃಷ್ಣ (7.5), ದಕ್ಷಿಣ ಕನ್ನಡದ ರವೀಶ್ ಕೋಟೆ, ಬೆಂಗಳೂರಿನ ಅರುಳ್ ಆನಂದ್ (7.5) ಮತ್ತು ಮೈಸೂರಿನ ಈಶ್ವರ್ ವಿ. ಅಯ್ಯಪ್ಪನ್ (7) ಕಮವಾಗಿ ಎರಡರಿಂದ ಐದರವರೆಗಿನ ಸ್ಥಾನಗಳನ್ನು ಪಡೆದರು.

ಬಾಲಕಿಯರ ವಿಭಾಗದಲ್ಲಿ ಆರುಷಿ ಎಲ್ಲ ಸುತ್ತುಗಳನ್ನು ಗೆದ್ದು ಸಂಭವನೀಯ 9 ಪಾಯಿಂಟ್ಸ್ ಪಡೆದರು. ಅವರು ಟ್ರೋಫಿ ಜೊತೆ ₹7,000 ಬಹುಮಾನ ಪಡೆದರು. ಮೈಸೂರಿನ ಪ್ರಸಿದ್ಧಿ ಭಟ್ (7 ಪಾಯಿಂಟ್ಸ್), ಬೆಂಗಳೂರು ನಗರದ ದೃಷ್ಟಿ ಘೋಷ್ (6.5), ದಕ್ಷಿಣ ಕನ್ನಡದ ಆದ್ಯಾ ಶೆಟ್ಟಿ (6.5), ಬೆಂಗಳೂರು ನಗರದ ಕೃಪಾ ಎಸ್.ಉಕ್ಕಲಿ (6.5) ಅವರು ಎರಡರಿಂದ ಐದರವರೆಗಿನ ಸ್ಥಾನಗಳನ್ನು ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.