ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಮ್ನಾಸ್ಟಿಕ್ಸ್‌ ಸ್ಪರ್ಧೆ: ಚಿರಂತ್‌, ದಾನೇಶ್ವರಿ, ವಾರುಣಿ ಚಾಂಪಿಯನ್‌

ಪ್ರಾಥಮಿಕ, ಪ್ರೌಢಶಾಲೆ ವಿದ್ಯಾರ್ಥಿಗಳ ರಾಜ್ಯಮಟ್ಟದ ಜಿಮ್ನಾಸ್ಟಿಕ್ಸ್‌ಗೆ ತೆರೆ
Published 7 ನವೆಂಬರ್ 2023, 23:30 IST
Last Updated 7 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಧಾರವಾಡ: ಬೆಂಗಳೂರು ದಕ್ಷಿಣದ ಚಿರಂತ್‌ ವಿ.ಶೆಟ್ಟಿ ಮತ್ತು ಧಾರವಾಡದ ದಾನೇಶ್ವರಿ ಕಮ್ಮಾರ್‌ ಅವರು ಮಂಗಳವಾರ ನಗರದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳ ರಾಜ್ಯಮಟ್ಟದ ಜಿಮ್ನಾಸ್ಟಿಕ್ಸ್‌ ಸ್ಪರ್ಧೆಯ 17 ವರ್ಷದೊಳಗಿನ ಆಲ್‌ರೌಂಡರ್‌ ವಿಭಾಗದಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್‌ ಪಟ್ಟ ಗಳಿಸಿದರು.

ಬೆಂಗಳೂರು ದಕ್ಷಿಣದ ವಾರುಣಿ ಬಿ.ಎಸ್‌. ಅವರು ರಿದಮ್ಯಾಟಿಕ್‌ ಜಿಮ್ನಾಸ್ಟಿಕ್ಸ್‌ ಸ್ಪರ್ಧೆಯ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದರು.

ಬಾಲಕರ ಆಲ್‌ರೌಂಡರ್‌ ಚಾಂಪಿಯನ್‌ ವಿಭಾಗದಲ್ಲಿ ಧಾರವಾಡದ ಗಂಗಾಧರ ಮಟ್ಟಿ ದ್ವಿತೀಯ ಮತ್ತು ಶ್ರೇಯಸ್‌ ಮಾನೆ ತೃತೀಯ ಸ್ಥಾನ ಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ದಕ್ಷಿಣದ ರಿಷ್ಯಾ ಕೆ. ದ್ವಿತೀಯ ಹಾಗೂ ಸೋನಿಕಾ ಗೌಡ ತೃತೀಯ ಸ್ಥಾನ ಗಳಿಸಿದರು.

ರಿದಮ್ಯಾಟಿಕ್‌ ಜಿಮ್ನಾಸ್ಟಿಕ್ಸ್‌ ಸ್ಪರ್ಧೆಯ ಬಾಲಕಿಯರ ಚಾಂಪಿಯನ್‌ ವಿಭಾಗದಲ್ಲಿ ಬೆಂಗಳೂರು ದಕ್ಷಿಣದ ಪ್ರಾರ್ಥನಾ ಕೆ.ಆರ್‌. ದ್ವಿತೀಯ ಹಾಗೂ ಧಾರವಾಡದ ಸೌಮ್ಯಾ ಕಿತ್ತೂರು ತೃತೀಯ ಸ್ಥಾನ ಪಡೆದರು.

ವಿವಿಧ ವಿಭಾಗಗಳ ಫಲಿತಾಂಶ:

ಬಾಲಕರ ವಿಭಾಗ– ಟೇಬಲ್‌ ವಾಲ್ಟ್‌: ಗಂಗಾಧರ್‌ ಮಟ್ಟಿ–1, ಚಿರಂತ್‌ ವಿ. ಶೆಟ್ಟಿ–2 ಹಾಗೂ ಶ್ರೇಯಸ್‌ ಮಾನೆ–3;

ಪ್ಯಾರಲಲ್‌ ಬಾರ್ಸ್‌: ಗಂಗಾಧರ್‌ ಮಟ್ಟಿ–1, ಶ್ರೇಯಸ್‌ ಮಾನೆ–2 ಹಾಗೂ ಚಿರಂತ್‌ ವಿ.ಶೆಟ್ಟಿ–3;

ಹಾರಿಜಾಂಟಲ್‌ ಬಾರ್ಸ್‌: ಚಿರಂತ್‌ ವಿ.ಶೆಟ್ಟಿ–1, ಗಂಗಾಧರ್‌ ಮಟ್ಟಿ–2 ಹಾಗೂ ಧಾರವಾಡದ ಸಮೃದ್ಧ ಹಿರೇಗೌಡರ್‌–3;

ಪೊಮ್ಮೆಲ್‌ ಹಾರ್ಸ್‌: ಗಂಗಾಧರ್‌ ಮಟ್ಟಿ–1, ಚಿರಂತ್‌ ವಿ. ಶೆಟ್ಟಿ–2 ಹಾಗೂ ಕೊಡಗಿನ ರಾಕೇಶ್‌–3;

ಫ್ಲೋರ್‌ ಎಕ್ಸರ್‌ಸೈಸ್‌: ಚಿರಂತ್‌ ವಿ. ಶೆಟ್ಟಿ–1, ಶ್ರೇಯಸ್‌ ಮಾನೆ–2 ಹಾಗೂ ಸಮೃದ್ಧ ಹಿರೇಗೌಡರ್‌–3;

ಸ್ಟಿಲ್‌ ರಿಂಗ್ಸ್‌: ಗಂಗಾಧರ್‌ ಮಟ್ಟಿ–1, ಶ್ರೇಯಸ್‌ ಮಾನೆ–2 ಹಾಗೂ ಚಿರಂತ್‌ ವಿ.ಶೆಟ್ಟಿ–3;

ಬಾಲಕಿಯರ ವಿಭಾಗ– ಫ್ಲೋರ್‌ ಎಕ್ಸರ್‌ಸೈಸ್‌: ದಾನೇಶ್ವರಿ ಕಮ್ಮಾರ್‌–1, ರಿಷ್ಯಾ ಕೆ.–2 ಹಾಗೂ ಸೋನಿಕಾ ಗೌಡ–3;

ಅನ್‌–ಇವನ್‌ ಬಾರ್ಸ್‌: ರಿಷ್ಯಾ ಕೆ.–1, ಧಾರವಾಡದ ಅಭಿನಯ ಮಾನೆ–2 ಹಾಗೂ ದಾನೇಶ್ವರಿ ಕಮ್ಮಾರ್‌–3;

ಬ್ಯಾಲೆನ್ಸಿಂಗ್‌ ಬೀಮ್‌: ದಾನೇಶ್ವರಿ ಕಮ್ಮಾರ್‌–1, ರಿಷ್ಯಾ ಕೆ.–2 ಹಾಗೂ ಸೋನಿಕಾ ಗೌಡ–3;

ಟೇಬಲ್‌ ವಾಲ್ಟ್‌: ಸೋನಿಕಾ ಗೌಡ–1, ರಿಷ್ಯಾ ಕೆ.–2 ಹಾಗೂ ದಾನೇಶ್ವರಿ ಕಮ್ಮಾರ್‌–1;

ರಿದಮ್ಯಾಟಿಕ್‌ ಜಿಮ್ನಾಸ್ಟಿಕ್ಸ್‌ –ಬಾಲಕಿಯರ ವಿಭಾಗ

ಹೂಪ್‌: ವಾರುಣಿ ಬಿ.ಎಸ್‌.–1, ಪ್ರಾರ್ಥನಾ ಕೆ.ಆರ್‌–2 ಹಾಗೂ ಸೌಮ್ಯಾ ಕಿತ್ತೂರು–3;

ಬಾಲ್‌: ವಾರುಣಿ ಬಿ.ಎಸ್‌.–1, ಕೋಮಲಾ ಆರ್‌.–2 ಹಾಗೂ ಧಾರವಾಡದ ಕೀರ್ತಿ ಗೋಕಾವಿ–3;

ಕ್ಲಬ್ಸ್‌: ವಾರುಣಿ ಬಿ.ಎಸ್‌.–1, ಸೌಮ್ಯಾ ಕಿತ್ತೂರು–2 ಹಾಗೂ ಪ್ರಾರ್ಥನಾ ಕೆ.ಆರ್‌–3;

ರಿಬ್ಬನ್‌: ವಾರುಣಿ ಬಿ.ಎಸ್‌.–1, ಪ್ರಾರ್ಥನಾ ಕೆ.ಆರ್‌–2 ಹಾಗೂ ತು‌ಮಕೂರಿನ ನವ್ಯಶ್ರೀ ಸಿ.ಎಸ್‌–3.

ವಾರುಣಿ ಬಿ.ಎಸ್‌.
ವಾರುಣಿ ಬಿ.ಎಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT