ಫೋರ್ಡೆ (ನಾರ್ವೆ): ಭಾರತದ ವೇಟ್ಲಿಫ್ಟರ್ಗಳು ಇಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್ಷಿಪ್ನಲ್ಲಿ ಸೋಮವಾರ ನಿರಾಸೆ ಮೂಡಿಸಿದರು. ಕಾಮನ್ವೆಲ್ತ್ ಚಾಂಪಿಯನ್ ಅಜಯಬಾಬು ವಲ್ಲೂರಿ ಪುರುಷರ 79 ಕೆ.ಜಿ ವಿಭಾಗದಲ್ಲಿ 16ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದರು.

20 ವರ್ಷ ವಯಸ್ಸಿನ ಅಜಯಬಾಬು ಒಟ್ಟು 323 ಕೆಜಿ (146 ಕೆ.ಜಿ ಸ್ನ್ಯಾಚ್ + 177 ಕೆ.ಜಿ ಕ್ಲೀನ್ ಮತ್ತು ಜರ್ಕ್) ಭಾರ ಎತ್ತಿ 39 ಸ್ಪರ್ಧಿಗಳ ಪೈಕಿ 16ನೇ ಸ್ಥಾನ ಪಡೆದರು. ಆಗಸ್ಟ್ನಲ್ಲಿ ಅಹಮದಾಬಾದ್ನಲ್ಲಿ ನಡೆದ ಕಾಮನ್ವೆಲ್ತ್ ಚಾಂಪಿಯನ್ಷಿಪ್ನ ಚಿನ್ನದ ಹಾದಿಯಲ್ಲಿ 335 ಕೆಜಿ (152 ಕೆ.ಜಿ + 183 ಕೆ.ಜಿ) ಭಾರ ಎತ್ತಿದ್ದರು. ಇದರೊಂದಿಗೆ ಮುಂದಿನ ವರ್ಷದ ಗ್ಲಾಸ್ಗೋದಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದರು.

ಪ್ಯಾರಿಸ್ ಒಲಿಂಪಿಕ್ಸ್ ಚಾಂಪಿಯನ್, ಇಂಡೊನೇಷ್ಯಾದ ರಿಜ್ಕಿ ಜುನಿಯಾನ್ಸಿಯಾ ಅವರು ಕ್ಲೀನ್ ಮತ್ತು ಜರ್ಕ್ನಲ್ಲಿ ವಿಶ್ವದಾಖಲೆಯ 204 ಕೆ.ಜಿ ಭಾರ ಎತ್ತಿದರು. ಒಟ್ಟು 361 ಕೆ.ಜಿ ಸಾಧನೆಯೊಂದಿಗೆ ಅವರು ಚಿನ್ನ ಗೆದ್ದರು. ಉತ್ತರ ಕೊರಿಯಾದ ರಿ ಚಾಂಗ್ ಸಾಂಗ್ (360 ಕೆ.ಜಿ) ಬೆಳ್ಳಿ, ಈಜಿಪ್ಟ್ನ ಮೊಹಮ್ಮದ್ ಯೂನೆಸ್ (360 ಕೆ.ಜಿ) ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಮಾಜಿ ಚಾಂಪಿಯನ್ ಮೀರಾಬಾಯಿ ಚಾನು ಮೊದಲ ದಿನ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಒಟ್ಟು 199 ಕೆಜಿ (84 ಕೆ.ಜಿ +115 ಕೆ.ಜಿ) ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದರು. ಅದು ಇಲ್ಲಿ ಭಾರತಕ್ಕೆ ದಕ್ಕಿದ ಏಕೈಕ ಪದಕವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.