ನವದೆಹಲಿ: ಭಾರತದ ಕ್ರಿಕೆಟ್ ತಾರೆ ರವಿಚಂದ್ರನ್ ಅಶ್ವಿನ್ ಅವರು ಗ್ಲೋಬಲ್ ಚೆಸ್ ಲೀಗ್‌ನ ಹೊಸ ತಂಡ ‘ಅಮೆರಿಕನ್ ಗ್ಯಾಂಬಿಟ್ಸ್’ ತಂಡಕ್ಕೆ ಸಹ ಮಾಲಿಕರಾಗಿದ್ದಾರೆ. ಈ ತಂಡವು ಲೀಗ್‌ನ ಎರಡನೇ ಆವೃತಿಯಲ್ಲಿ ಪಾಲ್ಗೊಳ್ಳಲಿದೆ. ಟೆಕ್ ಮಹಿಂದ್ರಾ ಮತ್ತು ಅಂತರರಾಷ್ಟ್ರೀಯ ಚೆಸ್ ಫೆಡರೇಷನ್ ಸಹಭಾಗಿತ್ವದಲ್ಲಿ ಲೀಗ್ ನಡೆಯುತ್ತಿದೆ.

ಲೀಗ್‌ನ ಎರಡನೇ ಆವೃತಿಯಲ್ಲಿ ಪಾಲ್ಗೊಳ್ಳಲಿರುವ ಆರು ಫ್ರಾಂಚೈಸಿಗಳ ಹೆಸರನ್ನು ಸೋಮವಾರ ಪ್ರಕಟಿಸಲಾಯಿತು. ಈ ಬಾರಿಯ ಲೀಗ್ ಅಕ್ಟೋಬರ್ 3 ರಿಂದ 12ರ ವರೆಗೆ ಲಂಡನ್‌ನಲ್ಲಿ ನಡೆಯಲಿದೆ.

ಚಿಂಗಾರಿ ಗಲ್ಫ್ ಟೈಟನ್ಸ್ ಬದಲಿಗೆ ಲೀಗ್‌ಗೆ ಸೇರ್ಪಡೆಯಾಗಿರುವ ಅಮೆರಿಕನ್ ಗ್ಯಾಂಬಿಟ್ಸ್ ತಂಡಕ್ಕೆ ಉದ್ಯಮಿಗಳಾದ ಪ್ರಚುರಾ ಪಿ.ಪಿ, ವೆಂಕಟ್ ಕೆ.ನಾರಾಯಣ ಮತ್ತು ಆರ್.ಅಶ್ವಿನ್ ಮಾಲಿಕರಾಗಿದ್ದಾರೆ.

‘ಚೆಸ್ ಜಗತ್ತಿಗೆ ಅಮೆರಿಕನ್ ಗ್ಯಾಂಬಿಟ್ಸ್ ತಂಡ ಪರಿಚಯಿಸಲು ಉತ್ಸುಕರಾಗಿದ್ದೇವೆ. ತಂಡದ ಪಯಣವನ್ನು ವೀಕ್ಷಿಸಲು ಮತ್ತು ಯಶಸ್ಸಿಗೆ ನೆರವಾಗಲು ನಾನು ಉತ್ಸುಕನಾಗಿದ್ದೇನೆ’ ಎಂದು ಅಶ್ವಿನ್ ತಿಳಿಸಿದ್ದಾರೆ.

ಗ್ಯಾಂಬಿಟ್ಸ್ ಜೊತೆಗೆ ಅಲ್ಪೈನ್ ಎಸ್‌ಜಿ ಪೈಪರ್ಸ್, ಪಿಬಿಜಿ ಅಲಾಸ್ಕನ್ ನೈಟ್ಸ್, ಗಾಂಜೆಸ್ ಗ್ರ್ಯಾನ್‌ಮಾಸ್ಟರ್ಸ್, ತ್ರಿವೇಣಿ ಕಾಂಟಿನೆಂಟಲ್ ಕಿಂಗ್ಸ್, ಮತ್ತು ಮುಂಬಾ ಮಾಸ್ಟರ್ಸ್ ತಂಡಗಳು ಎರಡನೇ ಆವೃತಿಯಲ್ಲಿ ಭಾಗವಹಿಸಲಿವೆ.

ಡಬಲ್ ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಪ್ರತಿ ತಂಡಗಳು 10 ಪಂದ್ಯಗಳನ್ನು ಆಡಲಿವೆ. ಲೀಗ್‌ನಲ್ಲಿ ಅತಿ ಹೆಚ್ಚು ಅಂಕ ಪಡೆಯುವ ಎರಡು ತಂಡಗಳು ಫೈನಲ್‌ನಲ್ಲಿ ಆಡಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.