ಲಂಡನ್: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಜಯಿಸಿದ್ದ ವೇಟ್‌ಲಿಫ್ಟರ್ ಪರದೀಪ್ ಸಿಂಗ್ ಅವರನ್ನು ಉದ್ದೀಪನ ಮದ್ದ ಸೇವನೆ ಆರೋಪದಲ್ಲಿ ಅಮಾನತು ಮಾಡಲಾಗಿದೆ.

ಅವರ ರಕ್ತದ ಮಾದರಿಯಲ್ಲಿ ಮನುಷ್ಯನ ಸಾಮರ್ಥ್ಯವೃದ್ಧಿ ಯ ಕೃತಕ ಹಾರ್ಮೋನ್ ಅಂಶ ಪತ್ತೆಯಾಗಿದೆ. ಇದನ್ನು ವಾಡಾ ನಿಷೇಧಿಸಿದೆ.

ಹೋದ ಡಿಸೆಂಬರ್‌ನಲ್ಲಿ ಪಟಿಯಾಲಾದಲ್ಲಿದ್ದ ಪ್ರದೀಪ್ ಸಿಂಗ್ ಅವರ ರಕ್ತದ ಮಾದರಿಯನ್ನು ನಾಡಾ ಸಂಗ್ರಹಿಸಿತ್ತು. ಆ ಸಂದರ್ಭದಲ್ಲಿ ಅವರು ತರಬೇತಿ ಶಿಬಿರದಲ್ಲಿ ತಾಲೀಮು ನಡೆಸುತ್ತಿದ್ದರು.

ಮಾರ್ಚ್‌ನಲ್ಲಿ ಎ ಸ್ಯಾಂಪಲ್ ಫಲಿತಾಂಶ ನೀಡಲಾಗಿತ್ತು. ಅದರಲ್ಲಿಯೇ ಅವರು ಮದ್ದು ಸೇವನೆ ಮಾಡಿದ್ದು ಸಾಬೀತಾಗಿತ್ತು. ಆದರೆ ಬಿ ರಿಪೋರ್ಟ್ ಬರುವವರೆಗೂ ನಾಡಾ ಪ್ರಕಟಿಸಿರಲಿಲ್ಲ.

’ಭಾರತದ ಅಥ್ಲೀಟ್‌ಗಳು ಎಚ್‌ಜಿಎಚ್ ಬಳಕೆ ಮಾಡುತ್ತಿರುವುದು ಇದು ಮೊದಲ ಸಲವಲ್ಲ. ಆದರೆ ರಕ್ತದ ಮಾದರಿಯಲ್ಲಿ ಇದು ಪತ್ತೆಯಾಗಿರುವುದು ಪ್ರಥಮ ಬಾರಿಯಾಗಿದೆ. ಈ ಮದ್ದಿನ ಬಳಕೆ ನಡೆಯುತ್ತಿರುವ ಗುಮಾನಿ ನಮಗೆ ಮೊದಲಿನಿಂದಲೂ ಇತ್ತು. ಆದ್ದರಿಂದ ಕೆಲವು ಅಥ್ಲೀಟ್‌ಗಳನ್ನು ಗುರಿಯಾಗಿಟ್ಟುಕೊಂಡು ತಪಾಸಣೆ ಮಾಡಿದ್ದೆವು. ಅದರಲ್ಲಿ ಪ್ರದೀಪ್ ಒಬ್ಬರಾಗಿದ್ದರು‘ ಎಂದು ನಾಡಾದ ಮಹಾನಿರ್ದೇಶಕ ನವೀನ್ ಅಗರವಾಲ್ ತಿಳಿಸಿದ್ದಾರೆ.

ಭಾರತದಲ್ಲಿರುವ ರಾಷ್ಟ್ರೀಯ ಉದ್ದೀಪನ ಮದ್ದು ಪ್ರಯೋಗಾಲಯದ ಮೇಲೆ ನಿಷೇಧ ಹೇರಲಾಗಿದೆ. ಆದ್ದರಿಂದ ನಾಡಾ ಮಾದರಿಗಳನ್ನು ಸಂಗ್ರಹಿಸಿ ವಿದೇಶದಲ್ಲಿರುವ ವಾಡಾ ಮಾನ್ಯತೆ ಪಡೆದ ಪ್ರಯೋಗಾಲಯಕ್ಕೆ ಕಳಿಸುತ್ತಿದೆ.

’ಈಗ ನಾವು ರಕ್ತದ ಮಾದರಿಗಳನ್ನು ಸಂಗ್ರಹಿಸುತ್ತಿಲ್ಲ. ಲಾಕ್‌ಡೌನ್ ಕಾರಣದಿಂದ ಪ್ರಯೋಗಾಲಯಕ್ಕೆ ಕಳಿಸುವುದು ಕಷ್ಟವಾಗುತ್ತಿದೆ‘ ಎಂದು ಅಗರವಾಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.