ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ ಲೀಗ್ | ಸೆಮಿಫೈನಲ್ ನಿರೀಕ್ಷೆಯಲ್ಲಿ ಪಟ್ನಾ-ಡೆಲ್ಲಿ

Published 25 ಫೆಬ್ರುವರಿ 2024, 15:50 IST
Last Updated 25 ಫೆಬ್ರುವರಿ 2024, 15:50 IST
ಅಕ್ಷರ ಗಾತ್ರ

ಹೈದರಾಬಾದ್‌: ಸತತ 3 ಬಾರಿ ಚಾಂಪಿಯನ್, 3 ಬಾರಿ ಸೆಮಿಫೈನಲ್ ಪ್ರವೇಶ ಮಾಡಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಪಟ್ನಾ ಪೈರೇಟ್ಸ್ ಮಿಂಚಿದೆ. ಈ ತಂಡ ಲೀಗ್‌ನ 10ನೇ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ ದಬಂಗ್ ಡೆಲ್ಲಿ ಎದುರು ಸೆಣಸಲಿದೆ.

ಗಚ್ಚಿಬೌಲಿಯ ಜಿ.ಎಂ.ಸಿ ಬಾಲಯೋಗಿ ಕ್ರೀಡಾಂಗಣದಲ್ಲಿ ಸೋಮವಾರ ಪಂದ್ಯ ನಡೆಯಲಿದ್ದು, ಮತ್ತೊಂದು ಹಣಾಹಣಿಯಲ್ಲಿ 2 ಬಾರಿಯ ರನ್ನರ್ ಅಪ್ ಗುಜರಾತ್ ಜೈಂಟ್ಸ್‌ ತಂಡವನ್ನು ಹರಿಯಾಣ ಸ್ಟೀಲರ್ಸ್‌ ಎದುರಿಸಲಿದೆ.

ಪುಣೇರಿ ಪಲ್ಟನ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದ್ದು, ಮೊದಲ ಎಲಿಮಿನೇಟರ್‌ನಲ್ಲಿ ಗೆದ್ದ ತಂಡ ಪುಣೇರಿ ವಿರುದ್ಧ ಮತ್ತು 2ನೇ ಎಲಿಮಿನೇಟರ್‌ನ ವಿಜೇತ ತಂಡ ಹಾಲಿ ಚಾಂಪಿಯನ್ ಜೈಪುರ್ ವಿರುದ್ಧ ಸೆಣಸಲಿದೆ.

ಯೋಜನೆಗಳು ಸಮರ್ಪಕವಾಗಿ ಕಾರ್ಯಗತ ಆಗತ್ತಿರುವುದರಿಂದ ತಂಡ ಈ ಬಾರಿ ಯಶಸ್ವಿಸ್ಸು ಕಂಡಿದೆ. ಎಲಿಮಿನೇಟರ್‌ನಲ್ಲಿ ಏನಾಗುತ್ತದೆಯೋ ನೋಡೋಣ.
ಆಶು ಮಲಿಕ್‌, ದಬಂಗ್ ಡೆಲ್ಲಿ ನಾಯಕ

ಲೀಗ್‌ ಹಂತದಲ್ಲಿ ಪಟ್ನಾ ಎದುರಿನ ಮೊದಲ ಪಂದ್ಯದಲ್ಲಿ ಡೆಲ್ಲಿ ಜಯ ಗಳಿಸಿದ್ದು 2ನೇ ಪಂದ್ಯ ಟೈ ಆಗಿತ್ತು. ನಾಯಕರಾದ ಆಶು ಮಲಿಕ್ ಮತ್ತು ಸಚಿನ್ ಕ್ರಮವಾಗಿ ಡೆಲ್ಲಿ ಮತ್ತು ಪಟ್ನಾ ತಂಡಗಳ ಭರವಸೆ. ಆಶು ಈ ಬಾರಿ ಒಟ್ಟು 257 ಪಾಯಿಂಟ್ ಕಲೆ ಹಾಕಿದ್ದರೆ, ಡು ಆರ್‌ ಡೈ ರೈಡ್‌ಗಳಲ್ಲಿ ಮಿಂಚಿರುವ ಸಚಿನ್ 157 ಪಾಯಿಂಟ್ ಗಳಿಸಿದ್ದಾರೆ. ಟ್ಯಾಕ್ಲಿಂಗ್‌ನಲ್ಲಿ ಡೆಲ್ಲಿ ತಂಡ ಯೋಗೇಶ್ ದತ್ತ ಮೇಲೆ ನಿರೀಕ್ಷೆ ಇರಿಸಿಕೊಂಡಿದೆ. ಪಟ್ನಾದ ರಕ್ಷಣಾ ವಿಭಾಗಕ್ಕೆ ಕೃಷನ್‌ ಆಸರೆ. ಆಲ್‌ರೌಂಡರ್‌ ಅಂಕಿತ್ ಬಲವೂ ತಂಡಕ್ಕೆ ಇದೆ.

ಜೈದೀಪ್‌–ಫಜಲ್ ಆಕರ್ಷಣೆ

ಗುಜರಾತ್‌ ಮತ್ತು ಹರಿಯಾಣ ತಂಡಗಳು ಲೀಗ್‌ ಹಂತದ ಕೊನೆಯ ಪಂದ್ಯಗಳಲ್ಲಿ ಸೋತು ಇಲ್ಲಿಗೆ ಬಂದಿವೆ. ಉಭಯ ತಂಡಗಳು ಮುಖಾಮುಖಿಯಾದ ಪಂದ್ಯಗಳಲ್ಲಿ ಹರಿಯಾಣ ಮೇಲುಗೈ ಸಾಧಿಸಿತ್ತು.

ಎರಡೂ ತಂಡಗಳನ್ನು ಡಿಫೆಂಡರ್‌ಗಳು ಮುನ್ನಡೆಸುತ್ತಿದ್ದಾರೆ. ಗುಜರಾತ್ ನಾಯಕ ಫಜಲ್ ಅತ್ರಾಚಲಿ ಈ ಬಾರಿ ಟ್ಯಾಕ್ಲಿಂಗ್‌ನಲ್ಲಿ 62 ಪಾಯಿಂಟ್ ಕಲೆ ಹಾಕಿದ್ದರೆ ಹರಿಯಾಣ ನಾಯಕ ಜೈದೀಪ್ ದಹಿಯಾ 67 ಟ್ಯಾಕಲ್ ಪಾಯಿಂಟ್ ಗಳಿಸಿದ್ದಾರೆ. ಗುಜರಾತ್‌ಗೆ ರೈಡಿಂಗ್ ವಿಭಾಗದಲ್ಲಿ ಪ್ರತೀಕ್ ದಹಿಯಾ ಮತ್ತು ಆಲ್‌ರೌಂಡರ್ ರೋಹಿತ್ ಗುಲಿಯಾ ಭರವಸೆಯಾಗಿದ್ದಾರೆ. ಡು ಆರ್ ಡೈ ರೈಡಿಂಗ್‌ನಲ್ಲಿ ಪಳಗಿರುವ ವಿನಯ್‌, ಸ್ಟೀಲರ್ಸ್‌ಗೆ ಏನು ಕೊಡುಗೆ ನೀಡುತ್ತಾರೆ ಎಂಬ ಕುತೂಹಲವೂ ಗರಿಗೆದರಿದೆ.

ಎಲಿಮಿನೇಟರ್ ಹಣಾಹಣಿ

ದಬಂಗ್ ಡೆಲ್ಲಿ –ಪಟ್ನಾ ಪೈರೇಟ್ಸ್‌

ಸಮಯ: ರಾತ್ರಿ 8.00

ಗುಜರಾತ್ ಜೈಂಟ್ಸ್‌–ಹರಿಯಾಣ ಸ್ಟೀಲರ್ಸ್‌

ಸಮಯ: ರಾತ್ರಿ 9.00

ಸ್ಥಳ: ಗಚ್ಚಿಬೌಲಿ, ಹೈದರಾಬಾದ್

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌, ಡಿಸ್ನಿ+ಹಾಟ್‌ಸ್ಟಾರ್

ಪ್ರೊ ಕಬಡ್ಡಿಯಲ್ಲಿ ಬಲಾಬಲ

ದಬಂಗ್ ಡೆಲ್ಲಿ–ಪಟ್ನಾ ಪೈರೇಟ್ಸ್‌

ಪಂದ್ಯಗಳು 19

ದಬಂಗ್ ಡೆಲ್ಲಿ ಜಯ 9

ಪಟ್ನಾ ಪೈರೇಟ್ಸ್ ಜಯ 8

ಟೈ 2

ಗುಜರಾತ್ ಜೈಂಟ್ಸ್‌–ಹರಿಯಾಣ ಸ್ಟೀಲರ್ಸ್

ಪಂದ್ಯಗಳು 14

ಹರಿಯಾಣ ಸ್ಟೀಲರ್ಸ್ ಜಯ 9

ಗುಜರಾತ್ ಜೈಂಟ್ಸ್ ಜಯ 4

ಟೈ 1

ಲೀಗ್ ಹಂತದಲ್ಲಿ 4 ತಂಡಗಳ ಏಳು–ಬೀಳು(ತಂಡಗಳು;ಪಂದ್ಯ;ಜಯ;ಸೋಲು;ಟೈ;ಪಾಯಿಂಟ್ಸ್‌;ಸ್ಥಾನ)

ದಬಂಗ್ ಡೆಲ್ಲಿ;22;13;6;3;79;3

ಗುಜರಾತ್ ಜೈಂಟ್ಸ್;22;13*;9;–;79;4

ಹರಿಯಾಣ ಸ್ಟೀಲರ್ಸ್;22;13*;8;1;70;5

ಪಟ್ನಾ ಪೈರೇಟ್ಸ್‌;22;11;8;3;69;6

(*ಒಟ್ಟು ಸ್ಕೋರ್ ಆಧಾರದಲ್ಲಿ ಸ್ಥಾನ ನಿರ್ಣಯ)

ದಬಂಗ್ ಡೆಲ್ಲಿ ತಂಡ ರೇಡರ್ ಮತ್ತು ನಾಯಕ ಆಶು ಮಲಿಕ್ ನಿರೀಕ್ಷೆ ಮೂಡಿಸಿದ್ದಾರೆ
ದಬಂಗ್ ಡೆಲ್ಲಿ ತಂಡ ರೇಡರ್ ಮತ್ತು ನಾಯಕ ಆಶು ಮಲಿಕ್ ನಿರೀಕ್ಷೆ ಮೂಡಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT