ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ ಲೀಗ್‌: ತಲೈವಾಸ್ ವಿರುದ್ಧ ಪೈರೇಟ್ಸ್‌ಗೆ ಭರ್ಜರಿ ಜಯ

ಪ್ರಶಾಂತ್ ರೈ, ಮೋನು ಗೋಯತ್ ಭರ್ಜರಿ ರೇಡಿಂಗ್
Last Updated 28 ಜನವರಿ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಆರಂಭದಿಂದಲೇ ಭರ್ಜರಿ ಆಟವಾಡಿದ ಪಟ್ನಾ ಪೈರೇಟ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ಶುಕ್ರವಾರ ಭರ್ಜರಿ ಗೆಲುವು ಸಾಧಿಸಿತು. ವೈಟ್‌ಫೀಲ್ಡ್‌ನ ಶೆರಟಾನ್ ಗ್ರ್ಯಾಂಡ್ ಹೋಟೆಲ್‌ನ ಆವರಣದಲ್ಲಿ ನಡೆಯುತ್ತಿರುವ ಟೂರ್ನಿಯ ಪಂದ್ಯದಲ್ಲಿ ಪೈರೇಟ್ಸ್‌ 52–24ರಲ್ಲಿ ತಮಿಳ್ ತಲೈವಾಸ್ ವಿರುದ್ಧ ಜಯಭೇರಿ ಮೊಳಗಿಸಿತು.

ಇದರೊಂದಿಗೆ 12 ಪಂದ್ಯಗಳಲ್ಲಿ ಎಂಟು ಜಯದೊಂದಿಗೆ ಪಟ್ನಾ ಎರಡನೇ ಸ್ಥಾನಕ್ಕೇರಿತು. ಬೆಂಗಳೂರು ಬುಲ್ಸ್ ಅಗ್ರಸ್ಥಾನದಲ್ಲೇ ಉಳಿದಿದೆ.

ಮೊದಲಾರ್ಧದಲ್ಲೇ ಒಂಬತ್ತು ಪಾಯಿಂಟ್‌ಗಳ (21–12) ಮುನ್ನಡೆ ಸಾಧಿಸಿದ ತಂಡ ದ್ವಿತೀಯಾರ್ಧದಲ್ಲೂ ಪಾಯಿಂಟ್‌ಗಳನ್ನು ಕಲೆ ಹಾಕುತ್ತ ಸಾಗಿತು. ಪ್ರಶಾಂತ್ ಕುಮಾರ್ ರೈ ಮತ್ತು ಮೋನು ಗೋಯತ್ರೇಡಿಂಗ್‌ನಲ್ಲಿ ಮಿಂಚಿದರು. ಅವರಿಬ್ಬರಿಗೆ ಸಚಿನ್ ಉತ್ತಮ ಸಹಕಾರ ನೀಡಿದರು. ನೀರಜ್ ಕುಮಾರ್ ಮತ್ತು ಸುನಿಲ್ ರಕ್ಷಣಾ ವಿಭಾಗದ ಚುಕ್ಕಾಣಿ ಹಿಡಿದರು. ಆಲ್‌ರೌಂಡರ್‌ ಮೊಹಮ್ಮದ್ರೇಜಾ ಚಿಯಾನೆ ಆರು ಪಾಯಿಂಟ್ ಕಲೆ ಹಾಕಿದರು.

ಮೋನು ಗೋಯತ್ ಆರು ಟಚ್ ಪಾಯಿಂಟ್ ಮತ್ತು ಎರಡು ಟ್ಯಾಕ್ಲಿಂಗ್ ಪಾಯಿಂಟ್ ಒಳಗೊಂಡ ಒಳಗೊಂಡ ಒಂಬತ್ತು ಪಾಯಿಂಟ್ ಕಲೆ ಹಾಕಿದರು. ಪ್ರಶಾಂತ್ ರೈ ಏಳು ಟಚ್ ಪಾಯಿಂಟ್ ಸೇರಿದಂತೆ ಎಂಟು ಪಾಯಿಂಟ್ ತಂದುಕೊಟ್ಟರು. ಸಚಿನ್, ಮೊಹಮ್ಮದ್ರೇಜಾ ಮತ್ತು ನೀರಜ್ ತಲಾ ಆರು ಪಾಯಿಂಟ್ ಗಳಿಸಿದರು. ಬಲಬದಿಯ ಕಾರ್ನರ್‌ನಲ್ಲಿ ಅಮೋಘ ಆಟವಾಡಿದ ಸುನಿಲ್ ಐದು ಪಾಯಿಂಟ್ ಗಳಿಸಿದರು.

ತಲೈವಾಸ್ ಪರ ಸಾಗರ್ ಏಳು ಟ್ಯಾಕ್ಲಿಂಗ್ ಪಾಯಿಂಟ್ ಸೇರಿದಂತೆ ಒಟ್ಟು ಎಂಟು ಪಾಯಿಂಟ್ ಗಳಿಸಿ ಮಿಂಚಿದರು. ರೇಡರ್ ಅಜಿಂಕ್ಯ ಪವಾರ್ ಐದು ಮತ್ತು ಮಂಜೀತ್ ನಾಲ್ಕು ಪಾಯಿಂಟ್ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT