ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಫ್‌ಲಿಂಪಿಕ್ಸ್: ಧನುಷ್–ಪ್ರಿಯೇಷಾಗೆ ಚಿನ್ನದ ಗರಿ

Last Updated 8 ಮೇ 2022, 12:27 IST
ಅಕ್ಷರ ಗಾತ್ರ

ನವದೆಹಲಿ: ಡೆಫ್‌ಲಿಂಪಿಕ್ಸ್ ಭಾರತದ ಕ್ರೀಡಾಪಟುಗಳು ಪದಕದ ಬೇಟೆ ಮುಂದುವರಿದಿದೆ. ಬ್ರೆಜಿಲ್‌ನ ಕಾಕ್ಸಾಯಿಸ್‌ ಡು ಸುಲ್‌ನಲ್ಲಿ ನಡೆಯತ್ತಿರುವ ಕೂಟದ 10 ಮೀ. ಏರ್ ರೈಫಲ್‌ ಮಿಶ್ರ ತಂಡ ವಿಭಾಗದಲ್ಲಿ ಧನುಷ್ ಶ್ರೀಕಾಂತ್‌– ಪ್ರಿಯೇಷಾ ದೇಶಮುಖ್‌ ಭಾನುವಾರ ಚಿನ್ನದ ಪದಕಕ್ಕೆ ಗುರಿಯಿಟ್ಟರು.

ಫೈನಲ್‌ನಲ್ಲಿ ಭಾರತದ ಜೋಡಿಯು 16–10ರಿಂದ ಜರ್ಮನಿಯ ಸೆಬಾಸ್ಟಿಯನ್ ಹೆರ್ಮಾನಿ ಮತ್ತು ಸಬ್ರಿನಾ ಎಕರ್ಟ್‌ ಅವರನ್ನು ಪರಾಭವಗೊಳಿಸಿದರು. ಧನುಷ್‌ ಅವರಿಗೆ ಇದು ಕೂಟದಲ್ಲಿ ಎರಡನೇ ಚಿನ್ನವಾಗಿದೆ. 10 ಮೀ. ಏರ್ ರೈಫಲ್‌ ವೈಯಕ್ತಿಕ ವಿಭಾಗದಲ್ಲೂ ಅವರು ಅಗ್ರಸ್ಥಾನ ಗಳಿಸಿದ್ದರು.

ತೆಲಂಗಾಣದ ಧನುಷ್‌, ಹೈದರಾಬಾದ್‌ನಲ್ಲಿರುವ ಗಗನ್ ನಾರಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

10 ಮೀ. ಏರ್‌ ರೈಫಲ್ ವಿಭಾಗದಲ್ಲೇ ಸ್ಪರ್ಧಿಸಿದ್ದ ಭಾರತದ ಇನ್ನೊಂದು ಜೋಡಿ ಶೌರ್ಯ ಸೈನಿ ಮತ್ತು ನತಾಶಾ ಜೋಷಿ ಕಂಚಿನ ಪದಕದ ಸುತ್ತಿನಲ್ಲಿ 8–16ರಿಂದ ಉಕ್ರೇನ್‌ನ ಅಲೆಕ್ಸಾಂಡರ್‌ ಕೊಸ್ತಿಕ್‌ ಮತ್ತು ವಯೊಲೆಟಾ ಲಿಕೊವಾ ಎದುರು ಸೋತರು.

ಡೆಫ್‌ಲಿಂಪಿಕ್ಸ್‌ನ ಶೂಟಿಂಗ್ ವಿಭಾಗದಲ್ಲೇ ಭಾರತಕ್ಕೆ ಇದುವರೆಗೆ ಮೂರು ಚಿನ್ನ ಮತ್ತು ಎರಡು ಕಂಚಿನ ಪದಕಗಳು ಒಲಿದಿವೆ.

ಭಾರತದ 10 ಮಂದಿ ಶೂಟರ್‌ಗಳ ತಂಡ ಕೂಟದಲ್ಲಿ ಕಣಕ್ಕಿಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT