ಷಿಕಾಗೊ: ಭಾರತದ ಸೌರವ್ ಘೋಷಲ್ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಸ್ಕ್ವಾಷ್ ಚಾಂಪಿಯನ್‌ಷಿಪ್‌ನ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ ಅಗ್ರ ರ್‍ಯಾಂಕ್‌ನ ಆಟಗಾರ ಪೆರುವಿನ ಡಿಯೆಗೊ ಎಲಾಯೆಸ್ ಎದುರು ಸೋತರು.

ಭಾನುವಾರ ರಾತ್ರಿ ನಡೆದ ಐದು ಗೇಮ್‌ಗಳ ಮ್ಯಾರಥಾನ್ ಪಂದ್ಯದಲ್ಲಿ ಘೋಷಲ್ 11-9, 11-4, 6-11, 3-11, 10-12 ರಲ್ಲಿ ಪರಾಭವಗೊಂಡರು.

ಮೊದಲ ಎರಡು ಗೇಮ್‌ಗಳನ್ನು ಗೆದ್ದುಕೊಂಡಿದ್ದ ಭಾರತದ ಆಟಗಾರ, ಆ ಬಳಿಕ ಲಯ ಕಳೆದುಕೊಂಡರು. 36 ವರ್ಷದ ಘೋಷಲ್ ನಿರ್ಣಾಯಕ ಗೇಮ್‌ನಲ್ಲಿ ಒತ್ತಡ ಎದುರಿಸಲು ವಿಫಲರಾದರು. ಐದನೇ ಗೇಮ್‌ನಲ್ಲಿ ಇಬ್ಬರೂ 10–10 ರಲ್ಲಿ ಸಮಬಲ ಸಾಧಿಸಿದ್ದರು. ಈ ವೇಳೆ ಘೋಷಲ್ ಸ್ವಯಂಕೃತ ತಪ್ಪು ಮಾಡಿದ್ದರಿಂದ ಡಿಯೆಗೊ 11–10 ರಲ್ಲಿ ಮುನ್ನಡೆ ಪಡೆದರು. ಆ ಬಳಿಕ ಒಂದು ಪಾಯಿಂಟ್ಸ್ ಗಳಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟರು.

2005 ರಿಂದಲೂ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುತ್ತಿರುವ ಘೋಷಲ್, ನಾಲ್ಕು ವರ್ಷಗಳ ಹಿಂದೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದರು.

ಭಾರತದ ಇತರ ಸ್ಪರ್ಧಿಗಳಾದ ಮಹೇಶ್ ಮನಗಾಂವ್ಕರ್, ರಮಿತ್ ಟಂಡನ್ ಮತ್ತು ಅಭಯ್ ಸಿಂಗ್ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ಕಣದಲ್ಲಿದ್ದ ಜೋಶ್ನಾ ಚಿಣ್ಣಪ್ಪ ಅವರು ಮೊದಲ ಸುತ್ತಿನಲ್ಲಿ ಅಮೆರಿಕದ ಒಲಿವಿಯಾ ಕ್ಲೈನ್ ಎದುರು ಸೋತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.