ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಮ್ಯಾರಥಾನ್: ಗೋಪಿ ಥೋಂಕಾಲ್‌ಗೆ ಪ್ರಶಸ್ತಿ

Published 25 ಫೆಬ್ರುವರಿ 2024, 16:14 IST
Last Updated 25 ಫೆಬ್ರುವರಿ 2024, 16:14 IST
ಅಕ್ಷರ ಗಾತ್ರ

ನವದೆಹಲಿ: ಮಾಜಿ ಏಷ್ಯಾ ಚಾಂಪಿಯನ್ ಗೋಪಿ ಥೋಂಕಾಲ್‌ಗೆ ಅವರು ಭಾನುವಾರ ನವದೆಹಲಿ ಮ್ಯಾರಾಥನ್ ಗೆದ್ದರು. ಆದರೆ, ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸುವ ಸಮಯವನ್ನು ಭಾರಿ ಅಂತರದಿಂದ ಕಳೆದುಕೊಂಡರು.

2017ರಲ್ಲಿ ಏಷ್ಯನ್ ಮ್ಯಾರಥಾನ್ ಪ್ರಶಸ್ತಿ ಗೆದ್ದಿದ್ದ 35 ವರ್ಷದ ಗೋಪಿ, ಪ್ಯಾರಿಸ್ ಕ್ರೀಡಾಕೂಟದ ಅರ್ಹತಾ ಸಮಯ (2:08:10) ಹೊರತಾಗಿಯೂ 42.195 ಕಿ.ಮೀ ದೂರವನ್ನು 2 ಗಂಟೆ, 14 ನಿಮಿಷ, 40 ಸೆಕೆಂಡುಗಳಲ್ಲಿ ಕ್ರಮಿಸಿ ಪುರುಷರ ಎಲೈಟ್‌ ರೇಸ್‌ನಲ್ಲಿ ಚಿನ್ನದ ಪದಕ ಗೆದ್ದರು.

2017ರ ಆವೃತ್ತಿಯಲ್ಲಿ ಇಲ್ಲಿ ಪ್ರಶಸ್ತಿ ಗೆದ್ದಿದ್ದ ಗೋಪಿ, 2:13:39 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರು.

2021ರ ಆವೃತ್ತಿಯ ಪ್ರಶಸ್ತಿ ಗೆದ್ದ ಶ್ರೀನು ಬುಗಾಥಾ 2: 14: 41 ಸಮಯದಲ್ಲಿ ಎರಡನೇ ಸ್ಥಾನ ಪಡೆದರೆ, ಅಕ್ಷಯ್ ಸೈನಿ 2: 15: 27ರಲ್ಲಿ ಕ್ರಮಿಸಿ ಮೂರನೇ ಸ್ಥಾನ ಪಡೆದರು.

ಪ್ಯಾರಿಸ್ ಒಲಿಂಪಿಕ್ಸ್ ಅರ್ಹತಾ ಸಮಯವು ಭಾರತೀಯರಿಗೆ ತಲುಪಲು ಸಾಧ್ಯವಿಲ್ಲ ಎಂದು ಗೋಪಿ ಈ ಹಿಂದೆ ಒಪ್ಪಿಕೊಂಡಿದ್ದರು.

ಮಹಿಳೆಯರ ಎಲೈಟ್ ರೇಸ್‌ನಲ್ಲಿ ಅಶ್ವಿನಿ ಮದನ್ ಜಾಧವ್ (2:52:25) ಮೊದಲ ಸ್ಥಾನ, ಠಾಕೂರ್ ನಿರ್ಮಾಬೆನ್ ಭರತ್ ಜೀ (2:55:47) ಮತ್ತು ದಿವ್ಯಾಂಕಾ ಚೌಧರಿ (2:57:06) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾದ ಆಶ್ರಯದಲ್ಲಿ ನಡೆದ ನವದೆಹಲಿ ಮ್ಯಾರಥಾನ್‌ನಲ್ಲಿ 200 ಕ್ಕೂ ಹೆಚ್ಚು ನಗರಗಳು, 27 ರಾಜ್ಯಗಳು ಮತ್ತು ಹಲವಾರು ದೇಶಗಳ ಸಾವಿರಾರು ಸ್ಪರ್ಧಿಗಳು ವಿವಿಧ ವಿಭಾಗಗಳಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT