ರಿಗಾ, ಲಾತ್ವಿಯಾ: ಭಾರತದ ದ್ರೋಣವಳ್ಳಿ ಹಾರಿಕಾ ಅವರು ಗ್ರ್ಯಾಂಡ್ ಸ್ವಿಸ್ ಚೆಸ್ ಟೂರ್ನಿಯಲ್ಲಿ ಜರ್ಮನಿಯ ಎಲಿಜಬೆತ್ ಪೆಹೆಟ್ಜ್ ಎದುರು ಡ್ರಾ ಸಾಧಿಸಿದರು. ಇದರೊಂದಿಗೆ ಜಂಟಿ ಮೂರನೇ ಸ್ಥಾನಕ್ಕೆ ಜಾರಿದರು.

ಹಾರಿಕಾ ಹಾಗೂ ಜರ್ಮನಿ ಆಟಗಾರ್ತಿ 31ನೇ ನಡೆಯ ಬಳಿಕ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಪರಸ್ಪರ ಸಮ್ಮತಿಸಿದರು. ಸದ್ಯ ಟೂರ್ನಿಯಲ್ಲಿ ಉಭಯ ಆಟಗಾರ್ತಿಯರ ಬಳಿ ತಲಾ 6.5 ಪಾಯಿಂಟ್ಸ್ ಇವೆ. ಮೂರನೇ ಸ್ಥಾನದಲ್ಲಿ ಐವರು ಆಟಗಾರ್ತಿಯಾಗಿದ್ದಾರೆ.

ಚೀನಾದ ಲೀ ಟಿಂಗ್‌ಜೀ ಅವರು ಮೊದಲ ಸ್ಥಾನದಲ್ಲಿದ್ದು, ಅವರದೇ ದೇಶದ ಝು ಜಿನೆರ್ ಎರಡನೇ ಸ್ಥಾನದಲ್ಲಿದ್ದಾರೆ.

ಭಾರತದ ವಂತಿಕಾ ಅಗರವಾಲ್ ಹಾಗೂ ದಿವ್ಯಾ ದೇಶಮುಖ್ ಅವರು ಕ್ರಮವಾಗಿ ನತಾಲಿಯಾ ಬುಕ್ಸಾ ಹಾಗೂ ಜೆಸ್ಸೆ ನಿಕ್ಕಿ ಫೆಬ್ರುವರಿ ಎದುರು ಜಯ ಸಾಧಿಸಿದರು.

ಆರ್.ವೈಶಾಲಿ ಹಾಗೂ ಪದ್ಮಿಣಿ ರಾವತ್ ತಮ್ಮ ಪಂದ್ಯಗಳಲ್ಲಿ ಡ್ರಾ ಸಾಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.