ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೇಬಲ್ ಟೆನಿಸ್: ಹರ್ಮಿತ್‌ಗೆ ಎರಡನೇ ರಾಷ್ಟ್ರೀಯ ಪ್ರಶಸ್ತಿ

Published 22 ಡಿಸೆಂಬರ್ 2023, 23:30 IST
Last Updated 22 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಪಂಚಕುಲ: ಇಲ್ಲಿನ ತೌ ದೇವಿ ಲಾಲ್ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 85ನೇ ಯುಟಿಟಿ ಸೀನಿಯರ್ ನ್ಯಾಷನಲ್ಸ್ ಮತ್ತು ಅಂತರ ರಾಜ್ಯ ಟೇಬಲ್ ಟೆನಿಸ್ ಚಾಂಪಿಯಷಿಪ್‌ನ ಪುರುಷರ ಸಿಂಗಲ್ಸ್ ನಲ್ಲಿ ಅಗ್ರ ಶ್ರೇಯಾಂಕದ ಹರ್ಮೀತ್ ದೇಸಾಯಿ ಎರಡನೇ ಶ್ರೇಯಾಂಕದ ಜಿ ಸತ್ಯನ್ ಅವರನ್ನು 4-3ರಿಂದ ಸೋಲಿಸಿ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದರು.

ಮಹಿಳಾ ಸಿಂಗಲ್ಸ್ ಕಿರೀಟವನ್ನು ರೈಲ್ವೆಯ ಪೊಯ್ಮಂಟಿ ಬೈಸ್ಯಾ ಅವರಿಗೆ ನೀಡಲಾಯಿತು. ಅವರು ಐಹಿಕಾ ಮುಖರ್ಜಿ ಅವರನ್ನು 4-2 ರಿಂದ ಸೋಲಿಸಿದರು.

ನಿರ್ಣಾಯಕ ಪಂದ್ಯದಲ್ಲಿ ಹರ್ಮೀತ್ 7-4 ರಲ್ಲಿ ಮೇಲುಗೈ ಸಾಧಿಸಿದ್ದರು. ಆದರೆ ಸತ್ಯನ್ ತಮ್ಮ ಎದುರಾಳಿ ತಪ್ಪು ಎಸೆಗೆಯುವಂತೆ ಮಾಡುವ ಮೂಲಕ ಪ್ರಾಬಲ್ಯ ಸಾಧಿಸಿದರು. ಹರ್ಮೀತ್ ತನ್ನ ಉತ್ಸಾಹ ಉಳಿಸಿಕೊಂಡು ಚಾಂಪಿಯನ್ ಆಗಿ ಹೊರಹೊಮ್ಮಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT