ಆಕ್ಲೆಂಡ್: ನವನೀತ್ ಕೌರ್ ಬಾರಿಸಿದ ಎರಡು ಗೋಲುಗಳ ನೆರವಿನಿಂದ ಭಾರತ ಮಹಿಳೆಯರು ನ್ಯೂಜಿಲೆಂಡ್ ತಂಡವನ್ನು ಮಣಿಸಿದರು. ಮೂರು ರಾಷ್ಟ್ರಗಳ ಹಾಕಿ ಟೂರ್ನಿಯ ಕೊನೆಯ ಪಂದ್ಯದಲ್ಲಿ ಬುಧವಾರ 3–0 ಅಂತರದ ಜಯ ಭಾರತಕ್ಕೆ ಒಲಿಯಿತು.

ನವನೀತ್45 ಹಾಗೂ 58ನೇ ನಿಮಿಷಗಳಲ್ಲಿ ಗೋಲು ಗಳಿಸಿದರೆ, ಮತ್ತೊಂದು ಗೋಲನ್ನು ಶರ್ಮಿಳಾ (54ನೇ ನಿಮಿಷ) ದಾಖಲಿಸಿದರು.

ಪಂದ್ಯದ ಮೊದಲ ಕ್ವಾರ್ಟರ್ ನೀರಸವಾಗಿತ್ತು. ಎರಡೂ ತಂಡಗಳು ಪ್ರಯತ್ನಿಸಿದರೂ ಯಾವುದೇ ಗೋಲು ದಾಖಲಾಗಿರಲಿಲ್ಲ. 45ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದ ನವನೀತ್, ಮಹತ್ವದ ಮುನ್ನಡೆ ಒದಗಿಸಿಕೊಟ್ಟರು. ನ್ಯೂಜಿಲೆಂಡ್ ಗೋಲ್‌ಕೀಪರ್ ಅನ್ನು ವಂಚಿಸಿದ ಶರ್ಮಿಳಾ ಮುನ್ನಡೆಯನ್ನು ಹಿಗ್ಗಿಸಿದರು. ಪಂದ್ಯ ಮುಗಿಯಲು ಕೇವಲ ಎರಡು ನಿಮಿಷಗಳಿರುವಾಗ ನವನೀತ್ ಮತ್ತೊಮ್ಮೆ ಕೈಚಳಕ ತೋರಿ ಗೆಲುವು ಖಚಿತಪಡಿಸಿದರು.

ಟೂರ್ನಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಡೆವಲಪ್‌ಮೆಂಟ್ ತಂಡವನ್ನು 4–0ಯಿಂದ ಪರಾಭವಗೊಳಿಸಿರಾಣಿ ರಾಂಪಾಲ್ ನೇತೃತ್ವದ ಭಾರತ ತಂಡ ಶುಭಾರಂಭ ಮಾಡಿತ್ತು. ಬಳಿಕ ನ್ಯೂಜಿಲೆಂಡ್ ರಾಷ್ಟ್ರೀಯ ತಂಡದ ಎದುರು ನಡೆದ ಎರಡು ಪಂದ್ಯಗಳಲ್ಲಿ 1–2 ಹಾಗೂ 0–1ರಿಂದ ಪರಾಭವಗೊಂಡಿತ್ತು. ಮಂಗಳವಾರ ನಡೆದ ನಾಲ್ಕನೇ ಪಂದ್ಯದಲ್ಲಿ ರಾಣಿ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಬ್ರಿಟನ್ ತಂಡದ ವಿರುದ್ಧ ಜಯ ಗಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.