ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಬೆಟ್ಟಿಂಗ್‌: ವಾರ್ಷಿಕ ₹2 ಲಕ್ಷ ಕೋಟಿ ತೆರಿಗೆ ನಷ್ಟ- ವರದಿ

Published 19 ಅಕ್ಟೋಬರ್ 2023, 13:00 IST
Last Updated 19 ಅಕ್ಟೋಬರ್ 2023, 13:00 IST
ಅಕ್ಷರ ಗಾತ್ರ

ನವದೆಹಲಿ: ಕ್ರಿಕೆಟ್‌ ವಿಶ್ವಕಪ್‌ ಮೂರನೇ ವಾರದತ್ತ ಸಾಗುತ್ತಿರುವಂತೆಯೇ ಅಕ್ರಮ ಬೆಟ್ಟಿಂಗ್‌ ದಂಧೆಯೂ ಬಿರುಸು ಪಡೆದುಕೊಳ್ಳುತ್ತಿದೆ. ವಾಮಮಾರ್ಗಗಳ ಮೂಲಕ ನಡೆಯುತ್ತಿರುವ ಈ ಬೆಟ್ಟಿಂಗ್‌ ದಂಧೆಯಿಂದಾಗಿ ₹2 ಲಕ್ಷ ಕೋಟಿ ತೆರಿಗೆ ನಷ್ಟವಾಗುತ್ತಿದೆ ಎಂದು ವರದಿಯೊಂದು ಹೇಳಿದೆ.

ಭಾರತದಲ್ಲಿ ಕ್ರೀಡೆಗೆ ಸಂಬಂಧಿಸಿ ಅಕ್ರಮ ಬೆಟ್ಟಿಂಗ್‌ ಮಾರುಕಟ್ಟೆಯಲ್ಲಿ ವಾರ್ಷಿಕ ₹8,20,000 ಕೋಟಿ ‘ವ್ಯವಹಾರ’ ನಡೆಯುತ್ತಿದೆ ಎಂದು ಥಿಂಕ್‌ ಚೇಂಜ್ ಫೋರಂ (ಟಿಸಿಎಫ್‌) ವರದಿ ತಿಳಿಸಿದೆ.

ಡಿಜಿಟಲ್‌ ತಂತ್ರಜ್ಞಾನದಲ್ಲಿ ಆಗಿರುವ ಬೆಳವಣಿಗೆ, ಸ್ಮಾರ್ಟ್‌ಫೋನ್‌ಗಳ ಬಳಕೆ, ಕ್ರೀಡಾ ಚಟುವಟಿಕೆಗಳ ವಿಸ್ತರಣೆ  ಇವೇ ಮೊದಲಾದ ಅಂಶಗಳು ಈ ರೀತಿಯ ಹಣದ ಪ್ರವಾಹ ಹರಿಯಲು ಕಾರಣವಾಗಿವೆ ಎಂದು ಅದು ಹೇಳಿದೆ.

ಸಾಕಷ್ಟು ಕಾನೂನು ನಿರ್ಬಂಧಗಳಿದ್ದರೂ, ಭಾರತದ ಅಕ್ರಮ ಬೆಟ್ಟಿಂಗ್‌ ಮತ್ತು ಜೂಜು ಮಾರುಕಟ್ಟೆ ಅಸಾಧಾರಣ ಬೆಳವಣಿಗೆ ಕಂಡಿದೆ ಎಂದೂ ವರದಿ ವಿವರಿಸಿದೆ.

ವರದಿಯ ಪ್ರಕಾರ, ಅಂದಾಜು ₹8.2 ಲಕ್ಷ ಕೋಟಿಯಷ್ಟು ಮೊತ್ತವನ್ನು ಬೆಟ್ಟಿಂಗ್ ವ್ಯವಹಾರದಲ್ಲಿ ತೊಡಗಿಸಲಾಗುತ್ತಿದೆ. ಈಗಿನ ಜಿಎಸ್‌ಟಿ ದರದ ಶೇ 28ರಂತೆ ಲೆಕ್ಕಹಾಕಿದರೆ ಸರ್ಕಾರಕ್ಕೆ ವಾರ್ಷಿಕವಾಗಿ ₹2.29 ಲಕ್ಷ ಕೋಟಿ ಆದಾಯ ನಷ್ಟವಾಗುತ್ತಿದೆ.

ಇಂಥ ಕಾನೂನುಬಾಹಿರ ಚಟುವಟಿಕೆ ನಿಯಂತ್ರಿಸಲು ಹೊಸ ಜಿಎಸ್‌ಟಿ ಆಡಳಿತವು, ಇವುಗಳ ಮೇಲೆ ನಿಗಾ ಇಡುವಂತೆ ಕಾರ್ಯಪಡೆ ಸ್ಥಾಪನೆಯಂಥ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಹೊರರಾಷ್ಟ್ರಗಳಿಂದ ಈ ಚಟುವಟಿಕೆ ನಡೆಸುವವರು ಭಾರತದಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವಂಥೆ ಕಾನೂನು ತರಬೇಕು ಎಂದು ವರದಿ ಸಲಹೆ ನೀಡಿದೆ.

ಕ್ರಿಕೆಟ್‌ ಅತಿ ಜನಪ್ರಿಯವಾಗಿರುವ ಭಾರತದಲ್ಲಿ ಬೆಟ್ಟಿಂಗ್‌ ವ್ಯವಹಾರದಲ್ಲಿ ಐಪಿಎಲ್‌ ಪಾಲು ದೊಡ್ಡ ಮಟ್ಟದಲ್ಲಿದೆ. 14 ಕೋಟಿ ಜನರು ಬೆಟ್ಟಿಂಗ್‌ ಮತ್ತು ಜೂಜಿನಲ್ಲಿ ಭಾಗಿಯಾಗುತ್ತಿರುವ ಅಂದಾಜು ಇದೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌ ವೇಳೆ) ಇವರ ಸಂಖ್ಯೆ 37 ಕೋಟಿವರೆಗೆ ಏರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT