ಲುಸಾನ್ (ಸ್ವಿಜರ್ಲೆಂಡ್): ಭಾರತ ತಂಡವು, ಈ ವರ್ಷದ ಡಿಸೆಂಬರ್ನಲ್ಲಿ ಚಿಲಿಯ ಸಾಂಟಿಯಾಗೊದಲ್ಲಿ ನಡೆಯಲಿರುವ ಎಫ್ಐಎಚ್ ಹಾಕಿ ಮಹಿಳಾ ಜೂನಿಯರ್ ವಿಶ್ವಕಪ್ನಲ್ಲಿ ‘ಸಿ’ ಗುಂಪಿನಲ್ಲಿದೆ. ಪ್ರಬಲ ಜರ್ಮನಿ ಜೊತೆಗೆ ಐರ್ಲೆಂಡ್ ಮತ್ತು ನಮೀಬಿಯಾ ಕೂಡ ಇದೇ ತಂಡದಲ್ಲಿವೆ.

ಎರಡು ವರ್ಷಗಳಿಗೊಮ್ಮೆ ನಡೆಯುತ್ತಿರುವ ಈ ಟೂರ್ನಿಯ 11ನೇ ಆವೃತ್ತಿಯಲ್ಲಿ 24 ತಂಡಗಳು ಭಾಗವಹಿಸುತ್ತಿವೆ. ಆರು ಗುಂಪುಗಳಿದ್ದು ಒಂದೊಂದರಲ್ಲಿ ನಾಲ್ಕು ತಂಡಗಳಿವೆ. ಟೂರ್ನಿಯು ಡಿಸೆಂಬರ್ 1 ರಿಂದ 13ರವರೆಗೆ ನಡೆಯಲಿದೆ.

ಐದು ಬಾರಿಯ ಚಾಂಪಿಯನ್ ನೆದರ್ಲೆಂಡ್ಸ್ ‘ಎ’ ಗುಂಪಿನಲ್ಲಿದ್ದರೆ, ಎರಡು ಬಾರಿಯ ವಿಜೇತರಾದ ಅರ್ಜೆಂಟೀನಾ ‘ಬಿ’ ಗುಂಪಿನಲ್ಲಿದೆ. ಗುಂಪುಗಳ ಡ್ರಾ ಸಮಾರಂಭ ಶುಕ್ರವಾರ ಸಾಂಟಿಯಾಗೊದಲ್ಲಿ ನಡೆಯಿತು.

ಸಾಂಟಿಯಾಗೊದಲ್ಲೇ ನಡೆದ ಈ ಹಿಂದಿನ ಜೂನಿಯರ್ ವಿಶ್ವಕಪ್ ಟೂರ್ನಿಯಲ್ಲಿ 16 ತಂಡಗಳು ಭಾಗವಹಿಸಿದ್ದವು. ಭಾರತ ಈ ಹಿಂದೆ ಟೂರ್ನಿಯನ್ನು ಒಮ್ಮೆಯೂ ಜಯಿಸಿಲ್ಲ. 2013ರಲ್ಲಿ ಜರ್ಮನಿಯ ಮಾಂಚೆಂಗ್ಲಡ್ಬಾಕ್ನಲ್ಲಿ ನಡೆದ ಟೂರ್ನಿಯಲ್ಲಿ ಮೂರನೇ ಸ್ಥಾನ ಮತ್ತು ದಕ್ಷಿಣ ಆಫ್ರಿಕಾದ ಪೊಚೆಫ್ಸ್ಟ್ರೂಮ್ನಲ್ಲಿ ನಡೆದ ಟೂರ್ನಿಯಲ್ಲಿ ಮೂರನೇ ಸ್ಥಾನ ಪಡೆದಿದ್ದು ಈ ಹಿಂದಿನ ಉತ್ತಮ ಪ್ರದರ್ಶನವಾಗಿದೆ.

ನಿಧಿ ನೇತೃತ್ವದ ತಂಡವು, ವಿಶ್ವಕಪ್ಗೆ ಸಿದ್ಧತೆಯಾಗಿ ಇತ್ತೀಚೆಗೆ ಅರ್ಜೆಂಟೀನಾದ ರೊಸಾರಿಯೊದಲ್ಲಿ ನಡೆದ ನಾಲ್ಕು ರಾಷ್ಟ್ರಗಳ ಟೂರ್ನಿಯಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದು, ಎರಡರಲ್ಲಿ ಸೋತು ಮಿಶ್ರಫಲ ಕಂಡಿತ್ತು. ಉರುಗ್ವೆ ತಂಡವನ್ನು ಎರಡು ಬಾರಿ ಸೋಲಿಸಿದ್ದ ಭಾರತ, ಚಿಲಿ ಮತ್ತು ಅರ್ಜೆಂಟೀನಾ ವಿರುದ್ಧ ತಲಾ ಒಂದು ಬಾರಿ ಜಯಗಳಿಸಿತ್ತು.

ಗುಂಪುಗಳು: ಎ ಗುಂಪು: ನೆದರ್ಲೆಂಡ್ಸ್, ಜಪಾನ್, ಚಿಲಿ, ಮಲೇಷ್ಯಾ; ಬಿ ಗುಂಪು: ಅರ್ಜೆಂಟೀನಾ, ಬೆಲ್ಜಿಯಂ, ಜಿಂಬಾಬ್ವೆ, ವೇಲ್ಸ್; ಸಿ ಗುಂಪು: ಜರ್ಮನಿ, ಭಾರತ, ಐರ್ಲೆಂಡ್, ನಮೀಬಿಯಾ; ಡಿ ಗುಂಪು: ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಚೀನಾ, ಆಸ್ಟ್ರಿಯಾ, ಇ ಗುಂಪು: ಆಸ್ಟ್ರೇಲಿಯಾ, ಸ್ಪೇನ್, ಕೆನಡಾ, ಸ್ಕಾಟ್ಲೆಂಡ್; ಎಫ್ ಗುಂಪು: ಅಮೆರಿಕ, ದಕ್ಷಿಣ ಕೊರಿಯಾ, ನ್ಯೂಜಿಲೆಂಡ್ ಮತ್ತು ಉರುಗ್ವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.