ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪುರುಷರ ಹಾಕಿ: ಆರಂಭಿಕ ಪಂದ್ಯ ಭಾರತ-ಸ್ವಿಟ್ಜರ್ಲೆಂಡ್

Published 25 ಜನವರಿ 2024, 22:49 IST
Last Updated 25 ಜನವರಿ 2024, 22:49 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ತಂಡ ಎಫ್‌ಐಎಚ್‌ ಪುರುಷರ ಹಾಕಿ ಫೈವ್ಸ್‌ ವಿಶ್ವಕಪ್‌ ಟೂರ್ನಿಯ ‘ಬಿ’ ಗುಂಪಿನಲ್ಲಿ ಭಾನುವಾರ ಸ್ವಿಟ್ಜರ್ಲೆಂಡ್‌ ತಂಡವನ್ನು ಎದುರಿಸಲಿದೆ. ಸಿಮ್ರನ್‌ಜೀತ್ ಸಿಂಗ್ ಬಳಗ ಅದೇ ದಿನ ಸಂಜೆ ಈಜಿಪ್ಟ್‌ ವಿರುದ್ಧ ಆಡಲಿದೆ. 

ಚೊಚ್ಚಲ ಹಾಕಿ ಫೈವ್ಸ್‌ ವಿಶ್ವಕಪ್‌ ಟೂರ್ನಿ ಮಸ್ಕತ್‌ನಲ್ಲಿ ನಡೆಯಲಿದೆ. ಒಟ್ಟು 16 ತಂಡಗಳು ಪಾಲ್ಗೊಳ್ಳುತ್ತಿದ್ದು, ತಲಾ ನಾಲ್ಕು ತಂಡಗಳನ್ನೊಳಗೊಂಡ ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. 

ಭಾರತ ತಂಡ ತನ್ನ ಕೊನೆಯ ಗ್ರೂಪ್ ಪಂದ್ಯವನ್ನು ಸೋಮವಾರ ಜಮೈಕಾ ವಿರುದ್ಧ ಆಡಲಿದೆ. 

'ಎ' ಗುಂಪಿನಲ್ಲಿ ನೆದರ್ಲೆಂಡ್ಸ್, ನೈಜೀರಿಯಾ, ಪಾಕಿಸ್ತಾನ ಮತ್ತು ಪೋಲೆಂಡ್ ತಂಡಗಳಿವೆ. 'ಸಿ' ಗುಂಪಿನಲ್ಲಿ ಆಸ್ಟ್ರೇಲಿಯಾ, ಕೆನ್ಯಾ, ನ್ಯೂಜಿಲೆಂಡ್, ಟ್ರಿನಿಡಾಡ್ ಮತ್ತು ಟೊಬಾಗೊ ಇದ್ದರೆ, 'ಡಿ' ಗುಂಪಿನಲ್ಲಿ ಫಿಜಿ, ಮಲೇಷ್ಯಾ, ಒಮಾನ್ ಮತ್ತು ಅಮೆರಿಕ ತಂಡಗಳು ಸ್ಥಾನ ಪಡೆದಿವೆ.

ಪ್ರತಿ ವಿಭಾಗದಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಮಂಗಳವಾರ ನಡೆಯಲಿರುವ ಕ್ವಾರ್ಟರ್ ಫೈನಲ್ ಪ್ರವೇಶಿಸಲಿವೆ. ಸೆಮಿಫೈನಲ್ ಪಂದ್ಯಗಳು ಅದೇ ದಿನ ನಡೆಯಲಿದ್ದು, ಫೈನಲ್ ಪಂದ್ಯ ಬುಧವಾರ ನಡೆಯಲಿದೆ. 

2023ರ ಪುರುಷರ ಏಷ್ಯನ್ ಹಾಕಿ ಫೈವ್ಸ್ ವಿಶ್ವಕಪ್ ಕ್ವಾಲಿಫೈಯರ್ಸ್‌ ಫೈನಲ್‌ನಲ್ಲಿ ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 4-4 (0-2 ಟೈಬ್ರೇಕರ್) ಅಂತರದಿಂದ ಸೋಲಿಸಿ ಪಂದ್ಯಾವಳಿಗೆ ಅರ್ಹತೆ ಪಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT